alex Certify ʼರೋಜಾʼ ಖ್ಯಾತಿಯ ನಟ ಅರವಿಂದ್‌ ಸ್ವಾಮಿ ಈಗ ಸಾವಿರಾರು ಕೋಟಿ ಮೌಲ್ಯದ ಕಂಪನಿ ಒಡೆಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼರೋಜಾʼ ಖ್ಯಾತಿಯ ನಟ ಅರವಿಂದ್‌ ಸ್ವಾಮಿ ಈಗ ಸಾವಿರಾರು ಕೋಟಿ ಮೌಲ್ಯದ ಕಂಪನಿ ಒಡೆಯ…!

ನೀವು ಖ್ಯಾತ ತಮಿಳು ನಿರ್ದೇಶಕ ಮಣಿರತ್ನಂ ಅವರ ಸಿನಿಮಾಗಳನ್ನು ವೀಕ್ಷಿಸಿದ್ದರೆ, ರೋಜಾ, ಬಾಂಬೆ ಮುಂತಾದ ಚಿತ್ರಗಳು ನಿಮ್ಮ ನೆಚ್ಚಿನ ಚಲನಚಿತ್ರಗಳ ಪಟ್ಟಿಯಲ್ಲಿ ಸೇರಿಕೊಂಡಿರಬಹುದು. ನಟ ಅರವಿಂದ್ ಸ್ವಾಮಿ ಕೂಡ ನಿಮ್ಮ ನೆಚ್ಚಿನ ಹೀರೋಗಳಲ್ಲಿ ಒಬ್ಬರಾಗಿರಾಬಹುದು. 3300 ಕೋಟಿಯ ಸಾಮ್ರಾಜ್ಯಕ್ಕಾಗಿ ಸಿನಿಮಾವನ್ನೇ ತೊರೆದ ಪ್ಯಾನ್ ಇಂಡಿಯಾ ಸ್ಟಾರ್ ಈ ಅರವಿಂದ್ ಸ್ವಾಮಿ ಎಂದು ನಿಮಗೆ ಗೊತ್ತೇ ?

ಹೌದು, ಅದ್ಭುತವಾಗಿ ನಟಿಸುತ್ತಿದ್ದ, ಆಕರ್ಷಕ ನೋಟ ಹೊಂದಿರುವ ನಟ ಅರವಿಂದ್ ಸ್ವಾಮಿ ಹಿಟ್ ಸಿನಿಮಾಗಳನ್ನು ನೀಡಿದ್ರೂ, ನಟನೆಗೆ ಟಾಟಾ ಬೈ ಬೈ ಹೇಳಿದ್ರು. ಅಲ್ಲದೆ, ಉದ್ಯಮಕ್ಕೆ ಕಾಲಿಟ್ಟ ಅವರು ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ. ರೊಮ್ಯಾಂಟಿಕ್ ಹೀರೋ, 90ರ ದಶಕದ ಹೆಂಗಳೆಯರ ಹಾಟ್ ಫೇವರಿಟ್ ಆಗಿದ್ದ ನಟ ಉದ್ಯಮ ಮಾಡಲೆಂದು ಹೋದಾಗ ಪಾರ್ಶ್ವವಾಯುವಿಗೆ ತುತ್ತಾಗಿದ್ದರಂತೆ. ಅದರ ವಿರುದ್ಧ ಹೋರಾಡಿ ಗೆದ್ದು ಬಂದ ನಟ, ಉದ್ಯಮದಲ್ಲೂ ಗೆದ್ದು ಮತ್ತೆ ಸಿನಿಮಾಗೆ ಕಮ್ ಬ್ಯಾಕ್ ಮಾಡಿದ್ದಾರೆ.

1991 ರಲ್ಲಿ ತಮ್ಮ 20ನೇ ವಯಸ್ಸಿನಲ್ಲಿ, ಅರವಿಂದ್ ಸ್ವಾಮಿ ಅವರು ಮಣಿರತ್ನಂ ಅವರ ʼದಳಪತಿʼ ಚಿತ್ರದಲ್ಲಿ ತಮ್ಮ ಚೊಚ್ಚಲ ಚಲನಚಿತ್ರವನ್ನು ಮಾಡುವ ಮೂಲಕ ಸಿನಿಮಾರಂಗ ಪ್ರವೇಶಿಸಿದ್ರು. 1992 ರಲ್ಲಿ ಮಣಿರತ್ನಂ ಅವರ ನಿರ್ದೇಶನದ ʼರೋಜಾʼ ಮತ್ತು 1995 ರಲ್ಲಿ ʼಬಾಂಬೆʼ ಚಲನಚಿತ್ರದಲ್ಲಿ ಅಭಿನಯಿಸುವ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ರು. ಈ ಚಲನಚಿತ್ರಗಳ ಯಶಸ್ಸು ಅವರನ್ನು ಒಬ್ಬ ಸ್ಟಾರ್ ನಟನಾಗಿ ಮೇಲಕ್ಕೆತ್ತಿತ್ತು.

1997 ರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ʼಮಿನ್ಸಾರ ಕನವುʼ ನಲ್ಲಿ ನಟಿಸಿದ್ರು. ತದನಂತರ ʼಸಾತ್ ರಂಗ್ ಕೆ ಸಪ್ನೆʼಯಲ್ಲಿ ಜೂಹಿ ಚಾವ್ಲಾ ಅವರೊಂದಿಗೆ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. 90 ರ ದಶಕದ ಅಂತ್ಯದ ವೇಳೆಗೆ, ಅವರ ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ.

ವೃತ್ತಿಜೀವನದ ಈ ಪಥದಿಂದ ನಿರುತ್ಸಾಹಗೊಂಡ ಸ್ವಾಮಿ ಅವರು 2000ನೇ ಇಸವಿಯ ನಂತರ ಚಲನಚಿತ್ರಗಳಲ್ಲಿ ನಟಿಸುವುದನ್ನು ನಿಲ್ಲಿಸಿದರು. 30ನೇ ವಯಸ್ಸಿನಲ್ಲಿ ನಟನೆಯನ್ನು ತೊರೆದ ಅವರು ಉದ್ಯಮವನ್ನು ಪ್ರವೇಶಿಸಿದ್ರು.

ತಮ್ಮ ತಂದೆಯ ಉದ್ಯಮವನ್ನು ನಿರ್ವಹಿಸುವುದರ ಮೇಲೆ ತಮ್ಮ ಚಿತ್ತವನ್ನು ಕೇಂದ್ರೀಕರಿಸಿದರು. 2005 ರಲ್ಲಿ ಅಪಘಾತಕ್ಕೊಳಗಾದ ಸ್ವಾಮಿ ಅವರ ಕಾಲು ಭಾಗಶಃ ಪಾರ್ಶ್ವವಾಯುವಿಗೆ ತುತ್ತಾಯಿತು. ನಾಲ್ಕೈದು ವರ್ಷದ ಹೋರಾಟದ ನಂತರ ಗುಣಮುಖರಾದ್ರು. ಉದ್ಯಮದಲ್ಲಿ ಗೆದ್ದ ಅವರು ಸಾವಿರಾರು ಕೋಟಿ ರೂ.ಗಳ ಸಾಮ್ರಾಜ್ಯವನ್ನೇ ಕಟ್ಟಿ ಬೆಳೆಸಿದ್ರು.

ಅರವಿಂದ್ ಸ್ವಾಮಿ ಚಿತ್ರರಂಗಕ್ಕೆ ಪುನರಾಗಮನ

ಸಿನಿಮಾದಿಂದ ಸುದೀರ್ಘ ಒಂದು ದಶಕದ ವಿಶ್ರಾಂತಿಯ ನಂತರ, 2013 ರಲ್ಲಿ, ಮಣಿರತ್ನಂ ಅವರ ʼಕಾದಲ್‌ʼ ಚಿತ್ರದ ಮೂಲಕ ಮತ್ತೆ ಸಿನಿಮಾಗೆ ಮರಳಿದ್ರು. ನಂತರ ಹೆಚ್ಚು-ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ರು. 2021ರಲ್ಲಿ ಬಾಲಿವುಡ್ಗೂ ಕಮ್ ಬ್ಯಾಕ್ ಮಾಡಿದ್ರು. ತಮಿಳು-ಹಿಂದಿ ಭಾಷೆಯಲ್ಲಿ ಬಿಡುಗಡೆಗೊಂಡ ʼತಲೈವಿʼ ಸಿನಿಮಾದಲ್ಲಿ ನಟಿ ಕಂಗನಾ ಜೊತೆ ಎಂಜಿ ರಾಮಚಂದ್ರನ್ ಪಾತ್ರ ಮಾಡಿದರು. 2021ರಲ್ಲಿ ನೆಟ್ಫ್ಲಿಕ್ಸ್ ಪ್ರಾಜೆಕ್ಟ್ ʼನವರಸʼ ಮೂಲಕ ಚೊಚ್ಚಲ ನಿರ್ದೇಶಕರಾಗಿಯೂ ಹೆಜ್ಜೆ ಇಟ್ಟಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...