ʼನಿಸಾನ್ʼ ಗ್ರಾಹಕರಿಗೆ ಗುಡ್‌ ನ್ಯೂಸ್: ಉಚಿತ ವಾಹನ ತಪಾಸಣೆ ಶಿಬಿರ ಆಯೋಜನೆ

Nissan Magnite Price in Bangalore | CarWale

 

ಬೆಂಗಳೂರು: ನಿಸಾನ್ ಮೋಟರ್ ಇಂಡಿಯಾ ಪ್ರೈ.ಲಿ. (ಎನ್‌ಎಂಐಪಿಎಲ್‌) ಕಂಪನಿಯು ತನ್ನ ಗ್ರಾಹಕರಿಗೆ ಜುಲೈ 15ರಿಂದ ಸೆಪ್ಟೆಂಬರ್‌ 15ರವರೆಗೆ, ಮುಂಗಾರು ಅವಧಿಯಲ್ಲಿ ವಾಹನಗಳ ಉಚಿತ ತಪಾಸಣಾ ಶಿಬಿರ ಆಯೋಜಿಸಿರುವುದಾಗಿ ಹೇಳಿದೆ. ಈ ಶಿಬಿರವು ನಿಸಾನ್ ಹಾಗೂ ಡಾಟ್ಸನ್ ವಾಹನಗಳಿಗೆ ಅಗತ್ಯ ಸೇವೆ ಒದಗಿಸುವ, ಕಂಪನಿಯ ಅಧಿಕೃತ ಸೇವಾಕೇಂದ್ರಗಳಲ್ಲಿ ನಡೆದಿದೆ. ಗ್ರಾಹಕರು ತಮ್ಮ ನಿಸಾನ್ ಕನೆಕ್ಟ್‌ ಆ್ಯಪ್ ಮೂಲಕ ಅಥವಾ ನಿಸಾನ್ ಇಂಡಿಯಾ ವೆಬ್‌ಸೈಟ್‌ನ ಮೂಲಕ ಈ ಶಿಬಿರದಲ್ಲಿ ತಮ್ಮ ವಾಹನ ತಪಾಸಣೆ ಮಾಡಿಸಿಕೊಳ್ಳಲು ಸಮಯ ಕಾಯ್ದಿರಿಸಬಹುದು.

ಮುಂಗಾರು ತಪಾಸಣಾ ಶಿಬಿರದಲ್ಲಿ ವಾಹನದ 30 ಅಂಶಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ. ಇದರಲ್ಲಿ ಉಚಿತವಾಗಿ ಬ್ಯಾಟರಿಯ ತಪಾಸಣೆ, ವಾಹನದ ಹೊರಮೈ ಹಾಗೂ ಒಳಾಂಗಣದ ಪರಿಶೀಲನೆ, ವಾಹನದ ಅಡಿಭಾಗದ ಪರಿಶೀಲನೆ, ರಸ್ತೆಯಲ್ಲಿ ಸಂಚರಿಸುವಾಗ ಅನುಭವ ಹೇಗಿರುತ್ತದೆ ಎಂಬುದರ ತಪಾಸಣೆ ಹಾಗೂ ಇವುಗಳಿಗೆ ಪೂರಕವಾಗಿ ವಾಹನದ ಹೊರಮೈ ಸ್ವಚ್ಛಗೊಳಿಸುವ ಸೇವೆಗಳು ಇರುತ್ತವೆ. ಗ್ರಾಹಕರಿಗೆ ವೈಪರ್ ಬ್ಲೇಡ್‌ಗಳ ಮೇಲೆ ಶೇಕಡ 10ರವರೆಗೆ ರಿಯಾಯಿತಿ ಸಿಗಲಿದೆ. ಬ್ರೇಕ್ ಪ್ಯಾಡ್ ಬದಲಾವಣೆ ಒಳಗೊಂಡಂತೆ, ರಿಪೇರಿ ಕೆಲಸಗಳಿಗೆ ಶೇಕಡ 20ರವರೆಗೆ ರಿಯಾಯಿತಿ ಸಿಗಲಿದೆ.

ಮನೆಬಾಗಿಲಿನಲ್ಲಿ ಸೇವೆ ಪಡೆಯುವ ಅವಕಾಶ ಮತ್ತು ನಿಸಾನ್ ಕಾರುಗಳನ್ನು ಡೀಲರ್‌ಶಿಪ್ ಕೇಂದ್ರಗಳಿಗೆ ಕೊಂಡೊಯ್ಯುವ, ಅಲ್ಲಿಂದ ಮನೆಗೆ ವಾಪಸ್ ತಂದುಕೊಡುವ ಸೇವೆಗಳನ್ನು ನಿಸಾನ್ ಕಂಪನಿಯು ಆರಂಭಿಸಿದೆ. ಸಮಗ್ರ ಸೇವೆಗಳನ್ನು 90 ನಿಮಿಷಗಳಲ್ಲಿ ಒದಗಿಸುವ ‘ನಿಸಾನ್ ಎಕ್ಸ್‌ಪ್ರೆಸ್ ಸರ್ವಿಸ್’ ಕೊಡುಗೆಯನ್ನು ಕೂಡ ಕಂಪನಿ ಒದಗಿಸುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read