
ಪ್ರತಿ ವರ್ಷ ಏಪ್ರಿಲ್ ತಿಂಗಳ ಮೊದಲ ದಿನವನ್ನು ಏಪ್ರಿಲ್ ಫೂಲ್ಸ್ ದಿನವೆಂದು ಆಚರಿಸಲಾಗುತ್ತದೆ. ಸ್ನೇಹಿತರು, ಕುಟುಂಬಸ್ಥರನ್ನು ಹಾಗೇ ತಮಾಷೆಯಾಗಿ ಫೂಲ್ ಮಾಡುವ ಮೂಲಕ ಇಂದಿನ ದಿನವನ್ನು ಎಂಜಾಯ್ ಮಾಡುತ್ತಾರೆ ಜನ.
ಇತಿಹಾಸ
ಏಪ್ರಿಲ್ ಫೂಲ್ ದಿನದ ನಿಖರ ಇತಿಹಾಸ ತಿಳಿದು ಬಂದಿಲ್ಲ. 1582 ರಲ್ಲಿ ಫ್ರಾನ್ಸ್‌ನಲ್ಲಿ ಗ್ರಗರಿಯನ್ ಕ್ಯಾಲೆಂಡರ್ ನಿಂದ ಜೂಲಿಯನ್ ಕ್ಯಾಲೆಂಡರ್‌ಗೆ ಬದಲಾವಣೆ ಮಾಡಿಕೊಳ್ಳಲಾಯಿತು. ಜೂಲಿಯನ್ ಕ್ಯಾಲೆಂಡರ್ ಅನುಸಾರ ಹೊಸ ವರ್ಷವು ಏಪ್ರಿಲ್ 1ರಿಂದ ಆರಂಭವಾಗಲಿದೆ. ಹೀಗಾಗಿ, ಹೊಸ ಕ್ಯಾಲೆಂಡರ್‌ಗೆ ಬದಲಾವಣೆಯಾದ ವಿಚಾರ ತಿಳಿದ ಕೆಲ ಮಂದಿ ಮಾರ್ಚ್ ಅಂತ್ಯದಲ್ಲಿ ಹೊಸ ವರ್ಷ ಆಚರಿಸಿದ್ದಾರೆ. ಜನವರಿ 1ಕ್ಕೆ ಹೊಸ ವರ್ಷದ ದಿನ ಸ್ಥಳಾಂತರಗೊಂಡಿದ್ದು ತಿಳಿಯದ ಕೆಲವರನ್ನು ’ಏಪ್ರಿಲ್ ಫೂಲ್‌ಗಳು’ ಎಂದು ಕರೆಯಲಾಯಿತು.
18ನೇ ಶತಮಾನದ ಸಂದರ್ಭದಲ್ಲಿ ಬ್ರಿಟನ್‌ನಾದ್ಯಂತ ಏಪ್ರಿಲ್ ಫೂಲ್ ದಿನಾಚರಣೆ ಹಬ್ಬಿತು. ಸ್ಕಾಟ್ಲೆಂಡ್‌ನಲ್ಲಿ ಎರಡು ದಿನಗಳ ಮಟ್ಟಿಗೆ ಈ ದಿನವನ್ನು ಆಚರಿಸಲು ಆರಂಭವಾಯಿತು. ಈ ವೇಳೆ ಜನರು ಒಬ್ಬರನ್ನೊಬ್ಬರು ತಮಾಷೆಗೆಂದು ಯಾಮಾರಿಸುತ್ತಾ ಏಪ್ರಿಲ್ ಫೂಲ್ ದಿನವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.