ಅಲೋವೆರಾದಿಂದ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. ಇದನ್ನು ಆಯುರ್ವೇದದಲ್ಲಿ ಬಳಸುತ್ತಾರೆ. ಇದು ಚರ್ಮಕ್ಕೆ ತುಂಬಾ ಒಳ್ಳೆಯದು. ಆದರೆ ಈ ಅಲೋವೆರಾ ಎಲೆಗಳನ್ನು ಹಲವು ದಿನಗಳವರೆಗೆ ತಾಜಾವಾಗಿಡಲು ಹೀಗೆ ಮಾಡಿ.
*ಅಲೋವೆರಾ ಎಲೆಗಳನ್ನು ಇಡುವಾಗ ಅದರ ಮೇಲೆ ಒಂದರಿಂದ 2 ಚಮಚ ಜೇನುತುಪ್ಪವನ್ನು ಹಾಕಿ ಫ್ರಿಜ್ ನಲ್ಲಿಡಿ. ಆ ಮೂಲಕ ಅಲೋವೆರಾ ಎಲೆಗಳನ್ನು ಹಾಳಾಗದಂತೆ 2 ವಾರಗಳ ತನಕ ಉಳಿಸಬಹುದು.
*ವಿಟಮಿನ್ ಸಿ ಸಹಾಯದಿಂದ ಅಲೋವೆರಾ ಎಲೆಗಳನ್ನು ಹಾಳಾಗದಂತೆ ಸಂಗ್ರಹಿಸಿಡಬಹುದು. ಹಾಗಾಗಿ ಅಲೋವೆರಾ ಎಲೆ ಕತ್ತರಿಸಿದ ಭಾಗಕ್ಕೆ ವಿಟಮಿನ್ ಸಿ ಪುಡಿ (ನಿಂಬೆ, ಕಿತ್ತಳೆ ಸಿಪ್ಪೆ ಪುಡಿ) ಹಾಕಿ ತಂಪಾದ ಸ್ಥಳದಲ್ಲಿ ಇಡಿ.
*ಅಲೋವೆರಾ ಎಲೆಗಳನ್ನು ಪ್ಲಾಸ್ಟಿಕ್ ನಲ್ಲಿ ಕವರ್ ಮಾಡಿ ಫ್ರಿಜ್ ಅಥವಾ ಮಣ್ಣಿನ ಒಳಗಡೆ ಇಡಿ. ಇದರಿಂದ ಅಲೋವೆರಾ ಹಾಳಾಗುವುದಿಲ್ಲ.