ಅಶ್ವಗಂಧ, ಅರಿಶಿನ, ಅಮೃತ ಬಳ್ಳಿ ಇತ್ಯಾದಿಗಳ ಕಷಾಯವನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯಕಾರಿ, ಸುಲಭವಾಗಿ ಸಿಗುವ ಅಮೃತ ಬಳ್ಳಿ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಜನ ಪ್ರಯತ್ನಿಸುತ್ತಿದ್ದಾರೆ. ಅಮೃತ ಬಳ್ಳಿ ಸೇವನೆ ಬಗ್ಗೆ ಸರಿಯಾದ ವಿಧಾನ ತಿಳಿದುಕೊಳ್ಳುವ ಅಗತ್ಯವಿದೆ.
ಅಮೃತ ಬಳ್ಳಿಯನ್ನು 3 ರೀತಿಯಲ್ಲಿ ಸೇವಿಸಬಹುದು. ಕಾಂಡ, ಬೇರು, ಎಲೆಗಳಲ್ಲೂ ಔಷಧಿ ಗುಣವಿದೆ. ಅಮೃತ ಬಳ್ಳಿ ಕಾಂಡವನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಚೆನ್ನಾಗಿ ಕುದಿಸಿ. ನಾಲ್ಕು ಲೋಟ ನೀರನ್ನು ಒಂದು ಲೋಟ ನೀರಾಗುವವರೆಗೆ ಕುದಿಸಿ ನೀರು ಒಂದು ನೋಟವಾದ ಮೇಲೆ ಬಿಡಿ. ಕಾಲು ಲೋಟ ನೀರನ್ನು ಪ್ರತಿ ದಿನ ಸೇವಿಸಬೇಕು.
ಅಮೃತ ಬಳ್ಳಿ ಕಷಾಯವನ್ನು ಕುಡಿಯಲು ಬಯಸಿದರೆ ಇದಕ್ಕಾಗಿ ಅಮೃತ ಬಳ್ಳಿ ತುಂಡು, 4-5 ತುಳಸಿ ಎಲೆಗಳು, 2 ಕರಿಮೆಣಸು, ಸ್ವಲ್ಪ ಅರಿಶಿನ, ಸ್ವಲ್ಪ ಶುಂಠಿ, ಸ್ವಲ್ಪ ಅಶ್ವಗಂಧ ಹಾಕಿ ಕಷಾಯ ಮಾಡಿ. ಒಂದು ಬಾಣಲೆಯಲ್ಲಿ 2 ಗ್ಲಾಸ್ ನೀರನ್ನು ಬಿಸಿ ಮಾಡಿ ಅದರಲ್ಲಿ ಈ ಪುಡಿ ಮಾಡಿದ ವಸ್ತುವನ್ನು ಹಾಕಿ. ಇದನ್ನು ಕಡಿಮೆ ಶಾಖದಲ್ಲಿ ಕುದಿಸಿ. ನೀರು ಒಂದು ಲೋಟವಾದ್ಮೇಲೆ ಫಿಲ್ಟರ್ ಮಾಡಿ ನಂತ್ರ ಕುಡಿಯಿರಿ.
ಅಮೃತ ಬಳ್ಳಿ ಅನೇಕ ಸ್ಥಳಗಳಲ್ಲಿ ಕಂಡು ಬರುವುದಿಲ್ಲ. ಹಾಗಾಗಿ ಅಮೃತ ಬಳ್ಳಿ ಮಾತ್ರೆಗಳನ್ನು ಸೇವಿಸಬಹುದು, ಮಗುವಿಗೆ 5 ರಿಂದ 10 ವರ್ಷವಾಗಿದ್ದರೆ, ಅವರಿಗೆ ಅರ್ಧ ಟ್ಯಾಬ್ಲೆಟ್ ನೀಡಿ. ಅದಕ್ಕಿಂತ ದೊಡ್ಡವರಾಗಿದ್ದರೆ ಒಂದು ಮಾತ್ರೆ ನೀಡಿ. ವಯಸ್ಕರು ದಿನದಲ್ಲಿ 2 ಮಾತ್ರೆಗಳನ್ನು ತೆಗೆದುಕೊಳ್ಳಬಹುದು.