ಪುಟ್ಟ ಬಾಲಕಿಯ ನೃತ್ಯಕ್ಕೆ ನೆಟ್ಟಿಗರು ಫಿದಾ: ವಿಡಿಯೊ ವೈರಲ್

ನೃತ್ಯ ಮತ್ತು ಸಂಗೀತಗಳಿಗೆ ಮನಸೋಲದವರು ಬಹಳ ಕಡಿಮೆ ಎಂದೇ ಹೇಳಬೇಕು. ಅದರಲ್ಲಿಯೂ ಕೆಲವು ಮಕ್ಕಳಿಗೆ ಈ ಕಲೆ ಹುಟ್ಟುತ್ತಲೇ ಕರಗತವಾಗಿರುತ್ತದೆ. ಇದೀಗ ಪುಟ್ಟ ಬಾಲಕಿಯೊಬ್ಬಳು ತನ್ನ ನೃತ್ಯದಿಂದ ನೆಟ್ಟಿಗರ ಮನಸ್ಸನ್ನು ಸೂರೆಗೊಂಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ.

ಹರ್ಯಾನ್ವಿ ಹಾಡಿನ ಕಮರ್ ತೇರಿ ಲೆಫ್ಟ್ ರೈಟ್ ಹೇಲ್‌ನಲ್ಲಿ ಪುಟ್ಟ ಹುಡುಗಿ ನೃತ್ಯ ಮಾಡಿದ್ದು, ಜನರು ಈಕೆಯ ನೃತ್ಯಕ್ಕೆ ಮನ ಸೋಲುತ್ತಿದ್ದಾರೆ. ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ದಿಶು ಯಾದವ್ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ.

ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಹಳದಿ ಬಣ್ಣದ ಫ್ರಾಕ್ ಮತ್ತು ಡೆನಿಮ್ ಜಾಕೆಟ್ ಧರಿಸಿರುವ ಪುಟ್ಟ ಹುಡುಗಿಯನ್ನು ವೇದಿಕೆಯ ಮೇಲೆ ಕಾಣಬಹುದು. ದಿಶು ಯಾದವ್ ಎಂಬ ಪುಟ್ಟ ಮಗು ಹಾಡಿನ ಆಕರ್ಷಕ ಬೀಟ್‌ಗಳಿಗೆ ಸ್ಟೆಪ್​ ಹಾಕುತ್ತಿದ್ದರೆ, ಗಾಯಕ ಅಜಯ್ ಹೂಡಾ ಹಾಡು ಹಾಡುತ್ತಿದ್ದಾರೆ.

ಜಾಲತಾಣದಲ್ಲಿ ಹಂಚಿಕೊಂಡ ನಂತರ ವೀಡಿಯೊ 16.5 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read