ಮಕ್ಕಳು ಹಾಗೂ ಪ್ರಾಣಿಗಳ ನಡುವೆ ಬೆಸೆಯಲ್ಪಡುವ ಮುಗ್ಧತೆಯ ಬಂಧವನ್ನು ವರ್ಣಿಸಲು ಯಾವ ಪದಕೋಶವೂ ಸಾಲದು. ಅದರಲ್ಲೂ ಸಾಕುನಾಯಿಗಳು ಮಕ್ಕಳ ಜೊತೆಗೆ ಆಟವಾಡುತ್ತಾ, ಅವರನ್ನು ಕಾಪಾಡುವಲ್ಲಿ ಬಹಳ ನಂಬಿಕಸ್ತ ಜೀವಿಗಳಾಗಿವೆ.
ಪುಟಾಣಿ ಬಾಲೆಯೊಬ್ಬಳು ತನ್ನ ಮುದ್ದಿನ ನಾಯಿಯೊಂದಿಗೆ ಸ್ಕಿಪ್ಪಿಂಗ್ ಆಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಸ್ಕಿಪ್ಪಿಂಗ್ ಆಡುವ ವೇಳೆ ಇಬ್ಬರ ನಡುವಿನ ತಾಳಮೇಳ ನೋಡುವುದೇ ಒಂದು ಆನಂದ.
ಆ ಮಗು ಹಾಗೂ ನಾಯಿಯ ನಡುವೆ ಅದ್ಯಾವ ಮಟ್ಟದಲ್ಲಿ ಬಾಂಧವ್ಯ ಬೆಸೆದುಕೊಂಡಿದೆ ಎಂಬುದನ್ನು ಸ್ಕಿಪ್ಪಿಂಗ್‌ನ ರಿದಂ ಸಾರಿ ಹೇಳುತ್ತಿದೆ. ಆಗ ತಾನೇ ಮಳೆ ಬಂದು ನಿಂತು ಒದ್ದೆಯಾದಂತಿರುವ ನೆಲದ ಮೇಲೆ ಇಬ್ಬರೂ ಸಖತ್ತಾಗಿ ಸ್ಕಿಪ್ಪಿಂಗ್ ಮಾಡಿದ್ದಾರೆ.
https://twitter.com/myworld2121/status/1576947223866544134?ref_src=twsrc%5Etfw%7Ctwcamp%5Etweetembed%7Ctwterm%5E1576947223866544134%7Ctwgr%5E64e9bcc9884bbeb727a9c20afcbf92b5a688e01b%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fnews18-epaper-dh523feb6a21f54358acc1d5d04a629da5%2Fwatchlittlegirlanddogskipropeinperfectsyncwitheachother-newsid-n511049818