ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಹಿಂದೆ Twitter) ನಲ್ಲಿ ಚಿಕ್ಕ ಹುಡುಗನೊಬ್ಬನ ಮೊದಲ ಹುಟ್ಟುಹಬ್ಬದ ಆಚರಣೆಯ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ಕರುಣೆ, ಸ್ನೇಹ ಮತ್ತು ಭಾವನಾತ್ಮಕ ಕ್ಷಣವೊಂದನ್ನು ಸೆರೆಹಿಡಿದಿದೆ.
ಹೃದಯತುಂಬಿ ಬರುವ ಈ ವಿಡಿಯೋದಲ್ಲಿ ಆ ಹುಡುಗ ತನ್ನ ಜೀವನದಲ್ಲಿ ಮೊದಲ ಬಾರಿಗೆ ಅಷ್ಟೊಂದು ಸಪ್ರೈಸ್ ಆಗಿರುವ ಕ್ಷಣವನ್ನು ತೋರಿಸುತ್ತದೆ. ಈ ಕ್ಷಣ ಆ ಹುಡುಗನ ಜೀವನದಲ್ಲಿ ಶಾಶ್ವತವಾಗಿ ನೆನಪಿನಲ್ಲಿರುವಂತಿದೆ.
ಹಿಂದೆಂದೂ ಬರ್ತ್‌ಡೇ ಸೆಲೆಬ್ರೇಶನ್ ಮಾಡಿಕೊಳ್ಳದ ಆ ಪುಟ್ಟ ಬಾಲಕನಿಗೆ ಅದು ಮರೆಯಲಾಗದ ಸಮಾರಂಭವಾಯಿತು. ಆ ಹುಡುಗನ ಶಿಕ್ಷಕರು ಮತ್ತು ಸಹಪಾಠಿಗಳ ಈ ಯೋಜನೆ, ಯೋಚನೆಗೆ ನೆಟ್ಟಿಗರು ಧನ್ಯವಾದವನ್ನು ತಿಳಿಸಿದ್ದಾರೆ. ಅವನ ಆ ಜನ್ಮದಿನವು ಪ್ರೀತಿ ಮತ್ತು ಸಂತೋಷದಿಂದ ತುಂಬಿದ ಮೆಮೊರೇಬಲ್ ಸಂದರ್ಭವಾಯಿತು.
ವೀಡಿಯೊದಲ್ಲಿ, ಹುಡುಗ ಕ್ಲಾಸ್ ರೂಂಗೆ ಎಂಟ್ರಿ ಆದ ಕೂಡಲೇ ಸಹಪಾಠಿಗಳು ಅವನ ಸುತ್ತಲೂ ಒಟ್ಟು ಸೇರುತ್ತಾರೆ. “ಜನ್ಮದಿನದ ಶುಭಾಶಯಗಳು” ಎಂಬ ಫೇಮಸ್ ಆಗಿರುವ ಹಾಡನ್ನು ಜೋರಾಗಿ ಹಾಡುತ್ತಾರೆ. ಈ ಹಾಡನ್ನು ಹಾಡುವ ಸಂದರ್ಭದಲ್ಲಿ ಸಹಪಾಠಿಗಳ ಮುಖ ಉತ್ಸಾಹದಿಂದ ಹೊಳೆಯುತ್ತವೆ. ಮತ್ತು ಅವರು ಸಹ ಅವನ ಸಂತೋಷದಲ್ಲಿ ಜೊತೆಯಾಗುತ್ತಾರೆ. ಬರ್ತ್‌ಡೇ ಸಾಂಗ್ ಹಾಡಿದ ಬಳಿಕ, ಸಹಪಾಠಿಗಳು ಹುಡುಗನನ್ನು ಹಗ್ ಮಾಡಿ ಆತ್ಮೀಯವಾಗಿ ಹುಟ್ಟಹಬ್ಬದ ಶುಭಾಶಯಗಳನ್ನು ಕೋರುತ್ತಾರೆ. ಈ ವೀಡಿಯೊ 2.8 ಮಿಲಿಯನ್ ವ್ಯೂವ್ಸ್ ಆಗಿದೆ.
The child had never celebrated a birthday before, but thanks to the teacher and classmates, they made it happen🎂
— Tansu Yegen (@TansuYegen) September 15, 2023