ಜಾಗತಿಕ ಮಟ್ಟದಲ್ಲಿ ಭಾರತೀಯ ಬ್ರ್ಯಾಂಡ್‌ಗಳು ಮಿಂಚು…..!

2025 ರಲ್ಲಿ ಭಾರತೀಯ ಬ್ರ್ಯಾಂಡ್‌ಗಳು ಜಾಗತಿಕ ಮಟ್ಟದಲ್ಲಿ ದೊಡ್ಡ ಸಾಧನೆ ಮಾಡಿವೆ. ಟಾಟಾ ಗ್ರೂಪ್, ಇನ್ಫೋಸಿಸ್, ಎಚ್‌ಡಿಎಫ್‌ಸಿ ಅಂತ ದೊಡ್ಡ ಕಂಪನಿಗಳು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ. ಬೇರೆ ದೇಶದ ಕಂಪನಿಗಳು ತಮ್ಮ ವ್ಯಾಪ್ತಿಯನ್ನು ಜಾಸ್ತಿ ಮಾಡ್ತಿದ್ದರೂ, ನಮ್ಮ ಭಾರತದ ಕಂಪನಿಗಳು ಹೊಸತನ ಹಾಗೂ ಒಳ್ಳೆ ಗ್ರಾಹಕ ಸೇವೆಯಿಂದ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿವೆ. ಬ್ರ್ಯಾಂಡ್ ಫೈನಾನ್ಸ್ ವರದಿ ಪ್ರಕಾರ, ಬೇರೆ ಬೇರೆ ಕ್ಷೇತ್ರಗಳಲ್ಲಿ ಭಾರತದ ಬ್ರ್ಯಾಂಡ್‌ಗಳ ಬೆಳವಣಿಗೆಯನ್ನ ಎತ್ತಿ ತೋರಿಸಿದೆ.

ಟಾಪ್ 10 ಅತ್ಯಮೂಲ್ಯ ಭಾರತೀಯ ಬ್ರ್ಯಾಂಡ್‌ಗಳ ಲಿಸ್ಟ್ ಇಲ್ಲಿದೆ:

  • ಟಾಟಾ ಗ್ರೂಪ್: 31.6 ಬಿಲಿಯನ್ ಡಾಲರ್ ಮೌಲ್ಯ, ಜಾಗತಿಕವಾಗಿ 60ನೇ ಸ್ಥಾನ.
  • ಇನ್ಫೋಸಿಸ್: 16.3 ಬಿಲಿಯನ್ ಡಾಲರ್ ಮೌಲ್ಯ, ಐಟಿ ಸೇವೆಗಳಲ್ಲಿ 2ನೇ ಸ್ಥಾನ.
  • ಎಚ್‌ಡಿಎಫ್‌ಸಿ ಗ್ರೂಪ್: 14.2 ಬಿಲಿಯನ್ ಡಾಲರ್ ಮೌಲ್ಯ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಥಮ.
  • ಎಲ್‌ಐಸಿ: 13.3 ಬಿಲಿಯನ್ ಡಾಲರ್ ಮೌಲ್ಯ, ವಿಮಾ ಕ್ಷೇತ್ರದಲ್ಲಿ ವೇಗದ ಬೆಳವಣಿಗೆ.
  • ರಿಲಯನ್ಸ್ ಗ್ರೂಪ್: 9.8 ಬಿಲಿಯನ್ ಡಾಲರ್ ಮೌಲ್ಯ, ಬೇರೆ ಬೇರೆ ಕ್ಷೇತ್ರಗಳಲ್ಲಿ ಮುಂಚೂಣಿ.
  • ಎಸ್‌ಬಿಐ ಗ್ರೂಪ್: 9.6 ಬಿಲಿಯನ್ ಡಾಲರ್ ಮೌಲ್ಯ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂದುವರಿಕೆ.
  • ಎಚ್‌ಸಿಎಲ್‌ಟೆಕ್: 8.9 ಬಿಲಿಯನ್ ಡಾಲರ್ ಮೌಲ್ಯ, ಐಟಿ ಸೇವೆಗಳಲ್ಲಿ ಪ್ರಗತಿ.
  • ಏರ್‌ಟೆಲ್: 7.7 ಬಿಲಿಯನ್ ಡಾಲರ್ ಮೌಲ್ಯ, ದೂರಸಂಪರ್ಕ ಕ್ಷೇತ್ರದಲ್ಲಿ ಮುಖ್ಯ ಪಾತ್ರ.
  • ಲಾರ್ಸೆನ್ ಮತ್ತು ಟೂಬ್ರೊ: 7.4 ಬಿಲಿಯನ್ ಡಾಲರ್ ಮೌಲ್ಯ, ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ.
  • ಮಹೀಂದ್ರಾ ಗ್ರೂಪ್: 7.2 ಬಿಲಿಯನ್ ಡಾಲರ್ ಮೌಲ್ಯ, ಬೇರೆ ಬೇರೆ ಬೆಳವಣಿಗೆ.

ಟಾಟಾ ಗ್ರೂಪ್ ಬೇರೆ ಬೇರೆ ಪ್ರಾಡಕ್ಟ್ಸ್ ಇಂದ ಮೊದಲ ಸ್ಥಾನದಲ್ಲಿದೆ. ಇನ್ಫೋಸಿಸ್ ಐಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಎಚ್‌ಡಿಎಫ್‌ಸಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ. ಎಲ್‌ಐಸಿ ವಿಮಾ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿದೆ. ರಿಲಯನ್ಸ್ ಬೇರೆ ಬೇರೆ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿದೆ.

ಭಾರತದ ಬ್ರ್ಯಾಂಡ್‌ಗಳು ಜಾಗತಿಕ ಮಾರುಕಟ್ಟೆಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿರುವುದು ದೇಶದ ಆರ್ಥಿಕತೆಗೆ ಹೆಮ್ಮೆಯ ವಿಷಯವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read