ಸಿಂಹದ ಬಾಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡ ಚಿರತೆ: ವಿಡಿಯೋ ವೈರಲ್‌

ವನ್ಯಜೀವಿ ವೀಡಿಯೋಗಳನ್ನು ನೋಡುವುದಕ್ಕಿಂತ ಹೆಚ್ಚು ಮನರಂಜನೆ ಮತ್ತೊಂದಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಇವು ಭಯಾನಕ ಆಗಿರುತ್ತವೆ, ಕೆಲವೊಮ್ಮೆ ಅಬ್ಬಾ ಬದುಕಿದೆಯಾ ಎನ್ನುವಂಥ ನಿಟ್ಟುಸಿರು ಬಿಡುವಂತೆ ಮಾಡುತ್ತದೆ. ಅಂಥದ್ದೇ ಒಂದು ಹಳೆಯ ವಿಡಿಯೋ ಮತ್ತೆ ವೈರಲ್‌ ಆಗುತ್ತಿದೆ.

ಸಿಂಹವೊಂದು ರಸ್ತೆಯಲ್ಲಿ ಚಿರತೆ ಮೇಲೆ ದಾಳಿ ನಡೆಸುತ್ತಿರುವ ವಿಡಿಯೋ ಇದಾಗಿದೆ. ಸಿಂಹವೊಂದು ಚಿರತೆಯ ಹತ್ತಿರ ಬರುತ್ತಿದ್ದಂತೆಯೇ ನೋಡುಗರ ಎದೆ ಢವಢವ ಎನ್ನುತ್ತದೆ. ವೀಡಿಯೋಗ್ರಾಫರ್ ಕಾಲಕಾಲಕ್ಕೆ ರಸ್ತೆಯ ಎಡಭಾಗವನ್ನೂ ತೋರಿಸಿ ವಿಡಿಯೋವನ್ನು ಇನ್ನಷ್ಟು ಕುತೂಹಲವನ್ನಾಗಿಸಿದ್ದಾರೆ.

ಸಿಂಹ ಬರುತ್ತಿರುವುದು ಆರಂಭದಲ್ಲಿ ಚಿರತೆಯ ಗಮನಕ್ಕೆ ಬಂದಿಲ್ಲವೆಂದು ತೋರುತ್ತದೆ, ದಾಳಿ ಮಾಡಲು ಹಾರಿದಾಗ, ಅದು ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ಮತ್ತು ರಸ್ತೆಯ ಇನ್ನೊಂದು ಬದಿಗೆ ಸುರಕ್ಷಿತವಾಗಿ ಓಡಿಹೋಗುತ್ತದೆ.

ಹೆಚ್ಚು ಚುರುಕಾದ ಮತ್ತು ವೇಗವಾದ ಪ್ರಾಣಿಯನ್ನು ಬೆನ್ನಟ್ಟಲು ತನಗೆ ಸಾಧ್ಯವಾಗುವುದಿಲ್ಲ ಎಂದು ತಿಳಿದಿರುವ ಕಾರಣ ಸಿಂಹವು ತನ್ನ ಹಾದಿಯಲ್ಲಿ ಮುಂದುವರಿಯುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read