ದೈಹಿಕ ಸಂಬಂಧ ಬೆಳೆಸಲು ನಿರಾಕರಿಸಿದ ಭಕ್ತೆಯ ಹತ್ಯೆಗೈದ ಆರೋಪದಡಿ ಅರ್ಚಕ ಅರೆಸ್ಟ್

ಸೇಲಂ: ಸೇಲಂನಲ್ಲಿ ಮಹಿಳಾ ಭಕ್ತೆಯೊಬ್ಬರನ್ನು ಹತ್ಯೆ ಮಾಡಿದ ಆರೋಪದ ಮೇಲೆ 42 ವರ್ಷದ ಅರ್ಚಕನನ್ನು ಶನಿವಾರ ಬಂಧಿಸಲಾಗಿದೆ.

ಸಂತ್ರಸ್ತೆ ಸೆಲ್ವಿ ತನ್ನೊಂದಿಗೆ ದೈಹಿಕ ಸಂಬಂಧ ಹೊಂದಲು ಅರ್ಚಕನ ಸಲಹೆ ತಿರಸ್ಕರಿಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ತನ್ನ ದುಷ್ಕೃತ್ಯವನ್ನು ಇತರರಿಗೆ ತಿಳಿಸಬಹುದೆಂಬ ಭಯದಿಂದ ಆರೋಪಿಯು ಆಕೆಗೆ ತಂಪು ಪಾನೀಯವನ್ನು ಬೆರೆಸಿ ಕೊಟ್ಟು ಕೊಂದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಸೇಲಂನ ಶಿವತಪುರಂ ಬಳಿಯ ಪೆರುಮಾಂಪಟ್ಟಿಯ ವಿ. ಕುಮಾರ್ ಎಂದು ಗುರುತಿಸಲಾಗಿದೆ. ಇವರು 20 ವರ್ಷಗಳ ಹಿಂದೆ ತಮ್ಮ ಕೃಷಿ ಭೂಮಿಯಲ್ಲಿ ಪೆರಿಯಾಂಡಿಚಿ ಅಮ್ಮನ್ ದೇವಸ್ಥಾನವನ್ನು ನಿರ್ಮಿಸಿ ಅರ್ಚಕರಾಗಿಯೂ ಕೆಲಸ ಮಾಡುತ್ತಿದ್ದರು.

ಪೊಲೀಸರ ಪ್ರಕಾರ, ಸೆಲ್ವಿ(28) ಮತ್ತು ಆಕೆಯ ಪತಿ ವಿ. ಪಸುವರಾಜ್ ಕಳೆದ 9 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ದಂಪತಿಗೆ ಮಗುವಾಗಿರಲಿಲ್ಲ. ಹೀಗಾಗಿ ಮಗುವಿಗಾಗಿ ಸೆಲ್ವಿ ವಿವಿಧ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥಿಸುತ್ತಿದ್ದರು. ಅಕ್ಟೋಬರ್ 15 ರಂದು ಸೇಲಂ ಜಿಲ್ಲೆಯ ಎಲಂಪಿಳ್ಳೈ ಎಂಬಲ್ಲಿಗೆ ಸ್ನೇಹಿತನನ್ನು ಭೇಟಿ ಮಾಡಲು ಹೋಗುವುದಾಗಿ ಸೆಲ್ವಿ ಮನೆಯಿಂದ ಹೊರಟು ಹೋಗಿದ್ದಳು. ಆದರೆ ಆಕೆ ನಾಪತ್ತೆಯಾಗಿದ್ದು, ಆಕೆಯ ಮೊಬೈಲ್ ಫೋನ್ ಕೂಡ ಸಂಪರ್ಕಕ್ಕೆ ಸಿಗಲಿಲ್ಲ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಪಸುವರಾಜ್ ಗುರುವಾರ ತಾರಮಂಗಲಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ, ಪೊಲೀಸರು ಹುಡುಕಾಟವನ್ನು ಪ್ರಾರಂಭಿಸಿದರು ಮತ್ತು ಕುಮಾರ್ ಒಡೆತನದ ದೇವಸ್ಥಾನದ ಬಳಿಯ ಪೊದೆಯಿಂದ ಸೆಲ್ವಿ ಶವವನ್ನು ವಶಪಡಿಸಿಕೊಂಡರು. ವಿಚಾರಣೆ ವೇಳೆ ಸೆಲ್ವಿ ಒಂದು ವಾರಕ್ಕೂ ಹೆಚ್ಚು ಕಾಲ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಶನಿವಾರ ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಕುಮಾರ್ ಅವರನ್ನು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read