ಗ್ರಂಥಪಾಲಕಿ ‘ಭಾಗ್ಯವತಿ’ ಆತ್ಮಹತ್ಯೆಯಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ : ಬಿ.ವೈ ವಿಜಯೇಂದ್ರ

ಬೆಂಗಳೂರು : ವೇತನವಿಲ್ಲದೇ ತೀವ್ರ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಗ್ರಂಥಪಾಲಕಿ ಭಾಗ್ಯವತಿ ವಿಶ್ವೇಶ್ವರಯ್ಯ ಅಗ್ಗಿಮಠ ಅವರ ಸಾವು ಕಾಂಗ್ರೆಸ್ ಸರ್ಕಾರದ ದಿವಾಳಿತನ ಹಾಗೂ ಹೃದಯ ಹೀನ ವ್ಯವಸ್ಥೆಯನ್ನು ಅನಾವರಣಗೊಳಿಸಿದೆ. ಭಾಗ್ಯವತಿ ಅಗ್ಗಿಮಠ ಅವರ ದುರಂತ ಅಂತ್ಯ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ ಅವರು ವೇತನವಿಲ್ಲದೇ ತೀವ್ರ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಗ್ರಂಥಪಾಲಕಿ ಭಾಗ್ಯವತಿ ವಿಶ್ವೇಶ್ವರಯ್ಯ ಅಗ್ಗಿಮಠ ಅವರ ಸಾವು
@INCKarnataka ಸರ್ಕಾರದ ದಿವಾಳಿತನ ಹಾಗೂ ಹೃದಯ ಹೀನ ವ್ಯವಸ್ಥೆಯನ್ನು ಅನಾವರಣಗೊಳಿಸಿದೆ.

ಭಾಗ್ಯವತಿ ಅಗ್ಗಿಮಠ ಅವರ ದುರಂತ ಅಂತ್ಯ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ರಾಜ್ಯದ ನಿರ್ದಯಿ ಸರ್ಕಾರ ತನ್ನ ನೌಕರರಿಗೆ ಸಂಬಳ ಕೊಡದ ಸ್ಥಿತಿಗೆ ತಲುಪಿ ಸಂಬಳವನ್ನೇ ನೆಚ್ಚಿಕೊಂಡು ಬದುಕು ನಡೆಸುವ ನೌಕರರ ಪಾಲಿಗೆ ಕಂಟಕಪ್ರಾಯವಾಗಿದೆ. ಸರ್ಕಾರದ ಈ ನಡೆ ಅತ್ಯಂತ ಖಂಡನೀಯ. ಮೃತ ಭಾಗ್ಯವತಿ ಅಗ್ಗಿಮಠ ಅವರ ಕುಟುಂಬ ಅತ್ಯಂತ ಸಂಕಷ್ಟದಲ್ಲಿದ್ದು ಈ ಕೂಡಲೇ ಸೂಕ್ತ ಪರಿಹಾರ ಹಾಗೂ ಒಬ್ಬರಿಗೆ ನೌಕರಿ ನೀಡುವ ಮೂಲಕ ಮೃತರ ಅವಲಂಬಿತ ಮಕ್ಕಳ ನೆರವಿಗೆ ಬಂದು ಸರ್ಕಾರ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ. ಮುಖ್ಯಮಂತ್ರಿಗಳಿಂದ ಹಿಡಿದು ಇತರ ಮಂತ್ರಿಗಳು ಹಾಗೂ ಅಧಿಕಾರಿಗಳು ಜನರ, ರೈತರ, ಸಮಸ್ಯೆಗಳಿಗೆ ಸ್ಪಂದಿಸದೆ, ವಿಮುಖರಾಗಿ ಅಧಿಕಾರ ರಾಜಕಾರಣದತ್ತ ತಮ್ಮ ಸಂಪೂರ್ಣ ಸಮಯವನ್ನು ಕೇಂದ್ರೀಕರಿಸಿದ್ದಾರೆ. ಸಚಿವ @PriyankKharge ಅವರು ತಮ್ಮ ಜಿಲ್ಲೆಯ ಸ್ಥಿತಿ ಏನಾಗಿದೆ ಎಂದು ತಿಳಿದುಕೊಳ್ಳುವ ವ್ಯವಧಾನ ತೋರುತ್ತಿಲ್ಲ , ಬಡವರ ಗೋಳು ಆಲಿಸುತ್ತಿಲ್ಲ. ನಿರ್ಲಕ್ಷ್ಯ, ಉಡಾಫೆ ಧೋರಣೆ ‘ಕೈ’ಸರ್ಕಾರದ ಆಡಳಿತ ವೈಖರಿ ಎನ್ನುವುದಕ್ಕೆ ಗ್ರಂಥಪಾಲಕಿ ಭಾಗ್ಯವತಿ ವಿಶ್ವೇಶ್ವರಯ್ಯ ಅಗ್ಗಿಮಠ ಅವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಸಾಕ್ಷಿ ಒದಗಿಸಿದೆ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read