ನೆಲಮಂಗಲ TO ಯಶವಂತಪುರ ರಸ್ತೆಗೆ ಹಿರಿಯ ನಟಿ ‘ಲೀಲಾವತಿ’ ಹೆಸರಿಡಲು ‘BBMP’ ಗೆ ಪತ್ರ

ಬೆಂಗಳೂರು : ನೆಲಮಂಗಲ TO ಯಶವಂತಪುರ ರಸ್ತೆಗೆ ಹಿರಿಯ ನಟಿ ‘ಲೀಲಾವತಿ’ ಹೆಸರಿಡಲು ಬಿಬಿಎಂಪಿಗೆ ಪತ್ರ ಬರೆದು ಮನವಿ ಸಲ್ಲಿಸಲಾಗಿದೆ.

ಹೌದು, ಇತ್ತೀಚೆಗಷ್ಟೇ ಅಗಲಿದ ಹಿರಿಯ ನಟಿ ಲೀಲಾವತಿ ಹೆಸರನ್ನು ನೆಲಮಂಗಲದಿಂದ ಯಶವಂತಪುರ ಸಂಪರ್ಕಿಸುವ ರಸ್ತೆಗೆ ನಟಿ ಲೀಲಾವತಿ ಹೆಸರಿಡುವಂತೆ ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಪಾಲಿಕೆ ಮುಖ್ಯ ಆಯುಕ್ತರಿಗೆ ಮನವಿ ಪತ್ರ ನೀಡುವ ಮೂಲಕ ಆಗ್ರಹಿಸಿದ್ದಾರೆ. ನೆಲಮಂಗಲ ಟು ಯಶವಂತಪುರ ರಸ್ತೆಗೆ ಲೀಲಾವತಿಯವರ ಹೆಸರಿಡೋ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಬಿಬಿಎಂಪಿ ಯಾವ ರೀತಿ ಸ್ಪಂದಿಸುತ್ತದೆ ಕಾದು ನೋಡಬೇಕಾಗಿದೆ.

ಬೆಂಗಳೂರಿನ ಪ್ರಮುಖ ರಸ್ತೆಗಳಿಗೆ ಪುನೀತ್ ರಾಜ್ ಕುಮಾರ್, ಅಂಬರೀಷ್ , ವಿಷ್ಣು ವರ್ಧನ್, ಡಾ ರಾಜ್ ಕುಮಾರ್ ಹೆಸರಿಡಲಾಗಿದ್ದು, ಅಂತೆಯೇ ಲೀಲಾವತಿ ಹೆಸರು ಕೂಡ ಇಡಬೇಕೆನ್ನುವ ಆಗ್ರಹ ಕೇಳಿಬಂದಿದೆ. ಕನ್ನಡ ಚಿತ್ರರಂಗದ ಎವರ್ ಗ್ರೀನ್ ನಟಿ, ಪೋಷಕ ನಟಿ ಹಾಗೂ ಸಾಮಾಜಿಕ ಕಳಕಳಿಯುಳ್ಳ ಮಾದರಿ ಮಹಿಳೆಯಾಗಿ ಗುರುತಿಸಿಕೊಂಡ ನಟಿ ಲೀಲಾವತಿ ನಿಧನರಾಗಿ 5 ದಿನಗಳು ಕಳೆದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read