ದುಷ್ಟ ಶಕ್ತಿ ಓಡಿಸಲು ವಾಸ್ತು ಅನುಸಾರ ಮನೆಯಲ್ಲಿರಲಿ ಈ ʼಗಿಡʼ

ವಾಸ್ತು ಶಾಸ್ತ್ರದ ಮೂಲಕ ನಾವು ನಮ್ಮ ಸುತ್ತಲಿನ ದುಷ್ಟ ಶಕ್ತಿಗಳನ್ನು ಜಯಿಸಬಹುದು. ವಾಸ್ತುವಿನಲ್ಲಿ ಉಲ್ಲೇಖಿಸಲಾದ ಪರಿಹಾರಗಳು ನಮ್ಮ ಜೀವನದಲ್ಲಿ ಶಕ್ತಿಯ ಹರಿವನ್ನು ತುಂಬುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಮನೆ, ಕಚೇರಿ, ದೇವಸ್ಥಾನದ ನಿರ್ಮಾಣ ಮಾಡಲಾಗುತ್ತದೆ. ಮನೆಯಲ್ಲಿರುವ ಕೋಣೆಗಳು, ವಸ್ತುಗಳು ವಾಸ್ತು ಶಾಸ್ತ್ರದ ಪ್ರಕಾರವಿದ್ರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ಮನೆಯಲ್ಲಿ ಸಾಮಾನ್ಯವಾಗಿ ಹೂ ಗಿಡಗಳನ್ನು ಬೆಳಸಲಾಗುತ್ತದೆ. ಯಾವ ಹೂವಿನ ಗಿಡಗಳು ಎಲ್ಲಿರಬೇಕು ಎಂಬುದನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಹೂವಿನ ಗಿಡಗಳು ಮನೆಯಲ್ಲಿದ್ದರೆ ಮನೆಯಲ್ಲಿ ಸುಖ, ಶಾಂತಿ ಸದಾ ನೆಲೆಸಿರುತ್ತದೆ.

ಉತ್ತರ ದಿಕ್ಕನ್ನು ಬುಧ ಗ್ರಹದ ದಿಕ್ಕು ಎಂದು ಪರಿಗಣಿಸಲಾಗಿದೆ. ಈ ದಿಕ್ಕು ಮುಕ್ತ ಮತ್ತು ಗಾಳಿಯಾಡುವ ಪ್ರದೇಶವೆಂದು ಪರಿಗಣಿಸಲಾಗುತ್ತದೆ. ಉತ್ತರ ದಿಕ್ಕಿನಲ್ಲಿ ಹಸಿರು ಗಿಡಗಳನ್ನು ಹಾಕಬೇಕು. ತುಳಸಿ, ಬಾಳೆ ಗಿಡವನ್ನು ಹಾಕಬೇಕು. ಹೀಗೆ ಮಾಡಿದ್ರೆ ಮನೆಯವರಿಗೆ ಚರ್ಮ ರೋಗ ಕಾಡುವುದಿಲ್ಲ.

ವಾಸ್ತು ಪ್ರಕಾರ ಸೂರ್ಯನ ದಿಕ್ಕು ಪೂರ್ವ. ಈ ದಿಕ್ಕಿನಲ್ಲಿ ಹಸಿರು ಹುಲ್ಲು ಹಾಕಬಹುದು. ಹೀಗೆ ಮಾಡಿದ್ರೆ ಕುಟುಂಬ ಸದಸ್ಯರು ಸೂರ್ಯ ದೇವರ ಅನುಗ್ರಹಕ್ಕೆ ಒಳಗಾಗ್ತಾರೆ. ಸಮಾಜದಲ್ಲಿ ಸ್ವಾಭಿಮಾನ, ಖ್ಯಾತಿ ಸಿಗುತ್ತದೆ. ಆರೋಗ್ಯ ವೃದ್ಧಿಯಾಗುತ್ತದೆ.

ದಕ್ಷಿಣ ದಿಕ್ಕನ್ನು ಮಂಗಳ ಗ್ರಹಕ್ಕೆ ಸೀಮಿತಗೊಳಿಸಲಾಗಿದೆ. ಕೆಂಪು ಹೂವುಗಳನ್ನು ನೆಡುವುದು ಈ ದಿಕ್ಕಿನಲ್ಲಿ ಶುಭವಾಗಿದೆ. ಇದು ಮನೆಯಲ್ಲಿ ಯಾವುದೇ ಅಡೆತಡೆಗಳನ್ನು ಉಂಟುಮಾಡುವುದಿಲ್ಲ. ಇದಲ್ಲದೆ ರಕ್ತ ಸಂಬಂಧಿತ ಕಾಯಿಲೆಗಳನ್ನು ನಿವಾರಿಸುತ್ತದೆ.

ಮನೆಯ ಪಶ್ಚಿಮ ದಿಕ್ಕನ್ನು ಚಂದ್ರನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಮಲ್ಲಿಗೆ, ಅಲೋವೆರಾ, ಕರಿಬೇವಿನ ಎಲೆಗಳನ್ನು ನೆಡುವುದರಿಂದ ಮನೆಯ ವಾತಾವರಣ ಶುದ್ಧವಾಗಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read