ಫಿಟ್ ಆಗಿರಲು ಜಿಮ್ ಜೊತೆ ಹೀಗಿರಲಿ ನಿಮ್ಮ ʼಡಯಟ್ʼ

ಆರೋಗ್ಯ ವರ್ಧನೆಗಾಗಿ ದೇಹ ಫಿಟ್ ಆಗಿರುವುದು ತುಂಬಾ ಮುಖ್ಯ. ಅಂದವಾಗಿ ಸ್ಲಿಮ್ ಆಗಿ ಕಾಣಬೇಕೆಂಬುದು ಪ್ರತಿಯೊಬ್ಬರ ಆಸೆ. ಹಾಗಾಗಿ ಈಗಿನ ಯುವ ಜನತೆ ಜಿಮ್ ನತ್ತ ಮುಖ ಮಾಡಿದ್ದಾರೆ. ಮುಂಚೆ ಪುರುಷರಿಗಷ್ಟೇ ಸೀಮಿತವಾಗಿದ್ದ ಜಿಮ್ ಈಗ ಮಹಿಳೆಯರಿಗೂ ಪ್ರಿಯ.

ಜಿಮ್ ಮಹಿಳೆಯರ ತೂಕವನ್ನು ಕಡಿಮೆ ಮಾಡುತ್ತದೆ. ಮಹಿಳೆಯರ ಜಿಮ್ ವ್ಯಾಯಾಮದಲ್ಲಿ  ಏರೋಬಿಕ್ಸ್, ಸೈಕ್ಲಿಂಗ್, ಯೋಗ ಸೇರಿವೆ. ಇವು ಮಹಿಳೆಯರ ದೇಹಕ್ಕೆ ಬಲ ತುಂಬುತ್ತವೆ ಮತ್ತು ದೇಹವನ್ನು ಹಗುರಗೊಳಿಸುತ್ತವೆ. ಇದರಿಂದಾಗಿ ದೇಹದಲ್ಲಿ ಹೆಚ್ಚಿನ ತೂಕವೂ ಕಂಡುಬರುವುದಿಲ್ಲ. ಅಲ್ಲದೇ ಹೆಚ್ಚು ಚಟುವಟಿಕೆಯಿಂದಿರಲು ಸಹಾಯ ಮಾಡುತ್ತದೆ.

ಜಿಮ್ ಫಿಟ್ನೆಸ್ ಗೆ ಒಳ್ಳೆಯದು ನಿಜ. ಆದ್ರೆ ಅದ್ರ ಜೊತೆ ಒಳ್ಳೆ ಡಯಟ್ ಇರ್ಲೇ ಬೇಕು. ಜಿಮ್ ಗೆ ಹೋಗುವವರು ಮೊಟ್ಟೆ ತಿನ್ನಲೇಬೇಕು. ಒಂದು ಮೊಟ್ಟೆ ಕನಿಷ್ಠ 7-9 ಗ್ರಾಂ ಪ್ರೊಟೀನ್, ಪೋಷಕಾಂಶ ಹೊಂದಿದೆ. ಇದು ಮಹಿಳೆಯರಿಗೆ ಬಹಳ ಪ್ರಯೋಜನಕಾರಿ. ಬೇಯಿಸಿದ ಮೊಟ್ಟೆ ಮೂಳೆಗಳನ್ನು ಬಲಗೊಳಿಸುತ್ತವೆ.

ಖರ್ಜೂರ ಶೇಕಡಾ 60-70 ರಷ್ಟು ಸಕ್ಕರೆ ಅಂಶ ಹೊಂದಿದೆ. ಕಬ್ಬಿಣ, ಕ್ಯಾಲ್ಸಿಯಮ್ ನಂತ ಪೋಷಕಾಂಶ ಇದ್ರಲ್ಲಿದ್ದು, ದೇಹದ ಶಕ್ತಿಯನ್ನು ಹೆಚ್ಚಿಸುತ್ತೆ. ವ್ಯಾಯಾಮಕ್ಕೆ ಮುಂಚೆ ಹಾಲಿಗೆ ಖರ್ಜೂರ ಹಾಕಿ ಕುಡಿಯುವುದು ಉತ್ತಮ.

ಡಯಟ್ ಜೊತೆ ಜಿಮ್ ಬಗ್ಗೆ ಸರಿಯಾಗಿ ತಿಳುವಳಿಕೆ ಅಗತ್ಯ. ಸತತವಾಗಿ ವ್ಯಾಯಾಮ ಮಾಡಬೇಡಿ. ನಡುವೆ 1 ರಿಂದ 2 ನಿಮಿಷಗಳ ನಡುವೆ ವಿರಾಮ ಇರಲಿ.

ನಿಮ್ಮ ದೈಹಿಕ ಸಾಮರ್ಥ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡಲು ಪ್ರಯತ್ನಿಸಬೇಡಿ. ಇದು ಆರೋಗ್ಯಕ್ಕೆ ಒಳ್ಳೇದಲ್ಲ.

ವ್ಯಾಯಾಮದ ನಂತರ ಆಹಾರ ಬೇಡ. ಸ್ವಲ್ಪ ಸಮಯದ ನಂತರ ಆಹಾರ ಸೇವಿಸಿ. ಆಹಾರದಲ್ಲಿ ಹಣ್ಣುಗಳಿರಲಿ.

ಬಹುಬೇಗ ಸ್ಲಿಮ್ ಆಗಲು ಯಾವುದೇ ಸ್ಟೆರಾಯಿಡ್ ಬಳಸಬೇಡಿ. ಇದು ದೇಹದ ನರಗಳ ಮೇಲೆ ಪ್ರಭಾವ ಬೀರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read