ಈ ಬಾರಿ ಹಬ್ಬದಲ್ಲಿ ಮಿಂಚಲು ಹೀಗಿರಲಿ ನಿಮ್ಮ ಅಲಂಕಾರ

 

ಹಬ್ಬ ಬಂತೆಂದರೆ ಹೆಣ್ಣು ಮಕ್ಕಳ ಸಡಗರ ಹೇಳತೀರದು. ದೀಪಾವಳಿ ಹಬ್ಬ ಬರುತ್ತಿದೆ. ಹಬ್ಬದ ಸಂದರ್ಭದಲ್ಲಿ ಮಹಿಳೆಯರು ಅಲಂಕಾರಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಬಂಧು ಬಳಗ ಸೇರುವ ಹಬ್ಬದಲ್ಲಿ ಮನೆಯ ಹೆಣ್ಣು ಮಕ್ಕಳಿಗೆ ಎಲ್ಲರ ಎದುರು ತಾವು ಚೆನ್ನಾಗಿ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಇರುತ್ತದೆ.

ಹಾಗಾಗಿ ಹಬ್ಬಕ್ಕೆ ಸಿಂಪಲ್ ಆಗಿ ಮೇಕಪ್ ಮಾಡಿಕೊಂಡು ಸುಂದರವಾಗಿ ಕಾಣಿಸಿಕೊಳ್ಳುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಮುಖದ ಆರೈಕೆ ಹೀಗಿರಲಿ:

ಯಾವುದಾದರೂ ಒಳ್ಳೆಯ ಫೇಸ್ ವಾಶ್ ಇಲ್ಲವೇ ನೀವು ಮನೆಯಲ್ಲಿಯೇ ಉಪಯೋಗಿಸುವ ಕಡಲೆ ಹಿಟ್ಟು, ಹೆಸರಿಟ್ಟನ್ನು ಬಳಸಿ ಮುಖ ತೊಳೆಯಿರಿ. ನಿಮ್ಮ ಚರ್ಮಕ್ಕೆ ಯಾವುದು ಅಲರ್ಜಿ ಆಲ್ಲವೋ ಅದನ್ನು ಬಳಸಿದರೆ ಒಳ್ಳೆಯದು.

ನಂತರ ಒಂದು ಒಳ್ಳೆಯ ಗುಣಮಟ್ಟದ ಮಾಯಿಶ್ಚರೈಸರ್ ಹೆಚ್ಚಿ. ಬಳಿಕ ಒಂದೆರೆಡು ಹನಿ ಫೌಂಡೇಷನ್ ತೆಗೆದುಕೊಂಡು ಅದನ್ನು ನಿಮ್ಮ ಮುಖದ ಎಲ್ಲ ಕಡೆ ತೆಳುವಾಗಿ ಹಚ್ಚಿಕೊಳ್ಳಿ. ಹಾಗೇ ನಿಮ್ಮ ಕುತ್ತಿಗೆಗೂ ಹಚ್ಚಿ. ನಂತರ ಮುಖಕ್ಕೆ ತೆಳುವಾಗಿ ಪೌಡರ್ ಸವರಿ.

 ತುಟಿಯ ಆರೈಕೆ:

ತುಟಿಯ ಭಾಗ ಕಪ್ಪಾಗಿದ್ದರೆ, ಸಕ್ಕರೆ ಹಾಗೂ ಜೇನು ತುಪ್ಪವನ್ನು ಬಳಸಿ ನಿಧಾನಕ್ಕೆ ತುಟಿಯನ್ನು ಸ್ಕ್ರಬ್ ಮಾಡಿ. ಇಲ್ಲದಿದ್ದರೆ ತೆಂಗಿನ ಎಣ್ಣೆಯಲ್ಲಿ ನಿಧಾನಕ್ಕೆ ಮಸಾಜ್ ಮಾಡಿಕೊಂಡರು ಪರ್ವಾಗಿಲ್ಲ. ನಂತರ ತುಟಿ ತೊಳೆದುಕೊಂಡು ಅದಕ್ಕೆ ನಿಮ್ಮಿಷ್ಟದ ಲಿಪ್ ಬಾಮ್ ಹಚ್ಚಿ. ಆಮೇಲೆ ನಿಮ್ಮ ತುಟಿಗೆ ಯಾವ ಬಣ್ಣ ಸರಿ ಹೊಂದುತ್ತದೆಯೋ ಆ ಬಣ್ಣದ ಲಿಪ್ ಸ್ಟಿಕ್ ಅನ್ನು ತೆಳುವಾಗಿ ಲೇಪಿಸಿ.

ಕಣ್ಣಿನ ಆರೈಕೆ:

ಕಣ್ಣಿನಲ್ಲಿ ಹೊಳಪಿದ್ದರೆ ಮುಖದ ಸೌಂದರ್ಯ ಇಮ್ಮಡಿಸುತ್ತದೆ. ಚೆನ್ನಾಗಿ ನಿದ್ರೆ ಮಾಡಿ. ಇದರಿಂದ ನಿಮ್ಮ ಕಣ್ಣಿನ ಸುತ್ತ ಕಪ್ಪಾಗುವುದು ತಪ್ಪುತ್ತದೆ. ರೋಸ್ ವಾಟರ್ ನಲ್ಲಿ ಅದ್ದಿದ ಹತ್ತಿಯನ್ನು ನಿಮ್ಮ ಕಣ್ಣುಗಳ ಮೇಲೆ 10 ನಿಮಿಷವಿಟ್ಟು ಮಲಗಿ. ನಂತರ ಶುದ್ಧವಾದ ನೀರಿನಿಂದ ಕಣ್ಣುಗಳನ್ನು ತೊಳೆದು ಕಾಜಲ್ ಹಚ್ಚಿ. ರೆಪ್ಪೆಗೆ ಐ ಲೈನರ್ ಅನ್ನು ಜಾಗರೂಕತೆಯಿಂದ ಹಚ್ಚಿ. ಹಾಗೇ ಹೆಣ್ಣಿನ ಅಂದ ಹೆಚ್ಚಿಸುವ ಇನ್ನೊಂದು ವಸ್ತುವೆಂದರೆ ಅದು ಬಿಂದಿ. ನಿಮ್ಮ ಉಡುಪಿಗೆ ಸರಿ ಹೊಂದುವ ಬಿಂದಿ ಹಾಕಿಕೊಂಡರೆ ಕಳೆಕಳೆಯಾಗಿ ಕಾಣುತ್ತೀರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read