CBSE 9 ನೇ ತರಗತಿಯ ಪಠ್ಯಪುಸ್ತಕದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರೊಬ್ಬರು ಮಾಡಿದ ಪೋಸ್ಟ್ ಎಲ್ಲರ ಗಮನ ಸೆಳೆದಿದೆ.
‘ಡೇಟಿಂಗ್ ಮತ್ತು ಸಂಬಂಧಗಳ ಅಧ್ಯಾಯವನ್ನು ಹೊಂದಿರುವ ಪಠ್ಯಪುಸ್ತಕವು ಸಾಂಪ್ರದಾಯಿಕ ಶೈಕ್ಷಣಿಕ ವಿಷಯಗಳಿಂದ ದೂರವಿರುವ ಪಾಠಗಳನ್ನು ಒಳಗೊಂಡಿದೆ. ಸಿಬಿಎಸ್ಇ ಕೈಗೊಂಡ ಪ್ರಗತಿಪರ ಹೆಜ್ಜೆಯಲ್ಲಿ, 9 ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣ ಪುಸ್ತಕಗಳನ್ನು ಪರಿಚಯಿಸಿದೆ. ಈ ಅಧ್ಯಾಯಗಳು ಸಂಪೂರ್ಣವಾಗಿ ಡೇಟಿಂಗ್ ಮತ್ತು ಸಂಬಂಧಗಳ ಸೂಕ್ಷ್ಮತೆಗಳನ್ನು ಚರ್ಚಿಸಲು ಮೀಸಲಾಗಿವೆ .
ಕ್ರಶ್ ಮತ್ತು ವಿಶೇಷ ಸ್ನೇಹದಂತಹ ವಿಷಯಗಳನ್ನು ಸರಳ ಕಥೆಗಳು ಮತ್ತು ಉದಾಹರಣೆಗಳ ಮೂಲಕ ಪಠ್ಯದಲ್ಲಿ ವಿವರಿಸಲಾಗಿದೆ. ನೆಟ್ಟಿಗರೊಬ್ಬರು ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ಪೋಸ್ಟ್ ಗೆ ತರಹೇವಾರಿ ಕಮೆಂಟ್ ಗಳು ಬರುತ್ತಿದೆ. ಕೆಲವರು ಶಾಕ್ ಆದರೆ , ಇನ್ನೂ ಕೆಲವರು ಆಧುನಿಕ ಜಗತ್ತಿಗೆ ಬೇಕಾಗುವ ಪ್ರಮುಖ ಅಧ್ಯಾಯಗಳನ್ನು ಸೇರಿಸಿದ್ದಕ್ಕಾಗಿ ಸಿಬಿಎಸ್ಇಯನ್ನು ಶ್ಲಾಘಿಸಿದರು.ಶಾಲಾ ಪಠ್ಯಕ್ರಮದಲ್ಲಿ ಈ ವಿಷಯಗಳನ್ನು ಸೇರಿಸಿರುವುದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗಳಾಗಿದೆ. ಮತ್ತು ಕುತೂಹಲವನ್ನು ಹುಟ್ಟುಹಾಕಿದೆ. ಕೆಲವರು ‘ಬ್ರೇಕಪ್ ಆದರೆ ಏನು ಮಾಡಬೇಕು, ಅದನ್ನು ಮಕ್ಕಳಿಗೆ ಹೇಳಿಕೊಡಿ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
https://twitter.com/nashpateee/status/1752336568147386620?ref_src=twsrc%5Etfw%7Ctwcamp%5Etweetembed%7Ctwterm%5E1752581908268191962%7Ctwgr%5E58475f75507a38e9542094d8c8bb53669f8d9bcc%7Ctwcon%5Es2_&ref_url=https%3A%2F%2Fwww.freepressjournal.in%2Feducation%2Fcbse-class-9-book-now-has-chapters-on-dating-relationships-explains-ghosting-and-catfishing