ತುಮಕೂರು: ಹಳ್ಳಿಗಳಿಗೆ ನುಗ್ಗಿ ಜನರ ಮೇಲೆ ದಾಳಿ ನಡೆಸಿದ ಚಿರತೆಯನ್ನು ಸೆರೆಹಿಡಿಯಲಾಗಿದೆ. ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗ್ರಾಮಗಳಾದ ಗೋಣಿ ತುಮಕೂರು, ದೇವಿಹಳ್ಳಿಯಲ್ಲಿ ದಾಳಿ ನಡೆಸಿದ ಚಿರತೆಯನ್ನು ಸೆರೆಹಿಡಿಯಲಾಗಿದೆ.
ಚಿರತೆ ದಾಳಿಯಿಂದಾಗಿ ಇವರಿಗೆ ಗಂಭೀರ ಗಾಯಗಳಾಗಿವೆ. ಗೋಣಿ ತುಮಕೂರು ಗ್ರಾಮಕ್ಕೆ ನುಗ್ಗಿ ವನಜಾಕ್ಷಿ, ಹುಚ್ಚಮ್ಮ, ಬೋರೇಗೌಡ ಎಂಬುವರ ಮೇಲೆ ಚಿರತೆ ದಾಳಿ ನಡೆಸಿದ್ದು, ಚಿರತೆಯನ್ನು ಶೆಡ್ ನಲ್ಲಿ ಗ್ರಾಮಸ್ಥರು ಕೂಡಿಹಾಕಿದ್ದಾರೆ.
ಶೆಡ್ ನಿಂದ ಹೊರಬಂದ ಚಿರತೆ ದೇವಿಹಳ್ಳಿಯ ಕಡೆಗೆ ನುಗ್ಗಿದೆ. ದೇವಿಹಳ್ಳಿಯ ಲಿಂಗೇಗೌಡ ಅವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ನಂತರ ಶೇಖರ್ ಎಂಬುವರ ಮನೆಗೆ ನುಗ್ಗಿ ದಾಳಿ ನಡೆಸಿದೆ. ಚಿರತೆಯನ್ನು ಮನೆಯಲ್ಲಿ ಕೂಡಿಹಾಕಿ ಶೇಖರ್ ಹೊರ ಬಂದಿದ್ದಾರೆ.
ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲು ಯತ್ನಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿದ್ದಾರೆ.