ಎಂಪಿಎಂಗೆ 40 ವರ್ಷಕ್ಕೆ 20 ಸಾವಿರ ಹೆಕ್ಟೇರ್ ಅರಣ್ಯ ಭೂಮಿ ಗುತ್ತಿಗೆ: ಕೇಂದ್ರ ಸಚಿವರಿಗೆ ಖಂಡ್ರೆ ಮನವಿ

ಬೆಂಗಳೂರು: ಭದ್ರಾವತಿ ಎಂಪಿಎಂ ಕಾರ್ಖಾನೆಗೆ ಅಕೇಶಿಯಾ ಬೆಳೆಯಲು ಅರಣ್ಯ ಭೂಮಿ ಗುತ್ತಿಗೆಯನ್ನು 40 ವರ್ಷ ಅವಧಿಗೆ ವಿಸ್ತರಿಸಲು ಒಪ್ಪಿಗೆ ನೀಡುವಂತೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರಿಗೆ ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮನವಿ ಸಲ್ಲಿಸಿದ್ದಾರೆ.

ಮಲೆನಾಡಿನಲ್ಲಿ ಆಕೆಶಿಯಾ ಬೆಳೆಯಲು ಭದ್ರಾವತಿಯ ಎಂಪಿಎಂ ಗೆ ನೀಡಿರುವ ಭೂಮಿಯ ಗುತ್ತಿಗೆ ಅವಧಿ 2020ಕ್ಕೆ ಮುಗಿದಿದೆ. ಆಗ ರಾಜ್ಯ ಸರ್ಕಾರ ಮುಂದಿನ 40 ವರ್ಷಗಳವರೆಗೆ ಇದನ್ನು ವಿಸ್ತರಿಸಿದ್ದು, ಇದಕ್ಕೆ ಕೇಂದ್ರ ಸರ್ಕಾರ ಇನ್ನು ಅನುಮತಿ ನೀಡಿ.ಲ್ಲ ಈ ಹಿನ್ನೆಲೆಯಲ್ಲಿ ಕೇಂದ್ರ ಅರಣ್ಯ ಸಚಿವರನ್ನು ಭೇಟಿಯಾದ ಈಶ್ವರ ಖಂಡ್ರೆ ಗುತ್ತಿಗೆ ಅವಧಿ ವಿಸ್ತರಿಸಲು ಒಪ್ಪಿಗೆ ನೀಡುವಂತೆ ಮನವಿ ಮಾಡಿದ್ದಾರೆ.

20,005.42 ಹೆಕ್ಟೇರ್ ಅರಣ್ಯ ಭೂಮಿಯನ್ನು ಗುತ್ತಿಗೆ ನೀಡಲಾಗಿದೆ. ಮೈಸೂರು ಪೇಪರ್ ಮಿಲ್ಸ್ ಕರ್ನಾಟಕ ಸರ್ಕಾರದ ಸಂಸ್ಥೆಯಾಗಿದ್ದು, ಕ್ಯಾಪ್ಟಿವ್ ಪಲ್ಪ್‌ ವುಡ್ ಪ್ಲಾಂಟೇಶನ್ ಕಂಪನಿಯು ಬಳಸಬೇಕಾಗಿದೆ. ಲೀಸ್ ಅವಧಿಯು 2020 ರಲ್ಲಿ ಮುಕ್ತಾಯಗೊಂಡಿದೆ. ರಾಜ್ಯ ಸರ್ಕಾರ ಅರಣ್ಯ(ಸಂರಕ್ಷಣೆ) ಅಧಿಕಾರವನ್ನು ಚಲಾಯಿಸುವ ಮೂಲಕ ಗುತ್ತಿಗೆಯನ್ನು ನವೀಕರಿಸಿದೆ. ಭಾರತ ಸರ್ಕಾರ ಅನುಮೋದನೆ ನೀಡಿಲ್ಲ. ಭಾರತ ಸರ್ಕಾರವು ಇದನ್ನು ಕಾಯಿದೆಯ ಉಲ್ಲಂಘನೆಯ ಕಾರ್ಯವೆಂದು ಅರ್ಥೈಸಿಕೊಂಡಿದೆ. ಗುತ್ತಿಗೆ ಅವಧಿ ಅನುಮೋದಿಸಲಾಗಿಲ್ಲ., ಇದರ ಪರಿಣಾಮವಾಗಿ ಕಂಪನಿಯ ಬಲಿತ ಪಲ್ಪ್‌ ವುಡ್ ಗಳನ್ನು ಕೊಯ್ಲು ಮಾಡಲಾಗುವುದಿಲ್ಲ ಎಂದು ತಿಳಿಸಿದ್ದು, ಆಕ್ಷೇಪಣೆ ಕೈಬಿಟ್ಟು ಗುತ್ತಿಗೆ ಅವಧಿ ವಿಸ್ತರಿಸುವಂತೆ ಕೋರಲಾಗಿದೆ.

2015ರಲ್ಲೇ ಎಂಪಿಎಂ ಕಾರ್ಖಾನೆ ಸ್ಥಗಿತಗೊಂಡಿದೆ. ಪುತ್ರ ಹಾಗೂ ನೂತನ ಸಂಸದ ಸಾಗರ್ ಖಂಡ್ರೆ ಅವರೊಂದಿಗೆ ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾದ ಈಶ್ವರ್ ಖಂಡ್ರೆ ಮತ್ತೆ 40 ವರ್ಷ ಅವಧಿಗೆ ಗುತ್ತಿಗೆ ನೀಡಲು ಮನವಿ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read