ಮನೆಯ ಒಳಾಂಗಣದಲ್ಲಿ ಬೆಳೆಸುವ ಸಸ್ಯಗಳ ಬಗ್ಗೆ ತಿಳಿದುಕೊಳ್ಳಿ

ಮನೆಯೊಳಗೆ ಸೂರ್ಯನ ಬೆಳಕು ಬಿದ್ದರೆ ಮನೆಯೊಳಗಿರುವ ಬ್ಯಾಕ್ಟೀರಿಯಾಗಳು ನಾಶವಾಗಿ ಅನಾರೋಗ್ಯ ಸಮಸ್ಯೆ ಕಾಡುವುದಿಲ್ಲ. ಆದರೆ ಕೆಲವು ಮನೆಯೊಳಗೆ ಸೂರ್ಯನ ಬೆಳಕು ಬೀಳುವುದಿಲ್ಲ. ಅಂತವರು ಮನೆಯೊಳಗೆ ಕೆಲವು ಗಿಡಗಳನ್ನು ಇಟ್ಟರೆ ಮನೆಗೆ ಒಳ್ಳೆಯದು. ಇದರಿಂದ ಮನೆ ಸ್ವಚ್ಛ ಮತ್ತು ಆರೋಗ್ಯಕರವಾಗಿರುತ್ತದೆ.

ಲಿಲ್ಲಿ ಗಿಡ (lily plant): ಲಿಲ್ಲಿ ಗಿಡವನ್ನು ನಿಮ್ಮ ಮನೆಯೊಳಗೆ ಇಡಬಹುದು. ಯಾಕೆಂದರೆ ಇದಕ್ಕೆ ಸೂರ್ಯ ಬೆಳಕಿನ ಅವಶ್ಯಕತೆ ಇಲ್ಲ. ಇದು ಮನೆಯ ಅಂದವನ್ನು ಹೆಚ್ಚಿಸುತ್ತದೆ. ಅಲ್ಲದೇ ಇದು ಮನೆಯೊಳಗಿನ ಕೆಟ್ಟ ಗಾಳಿಯನ್ನು ನಿವಾರಿಸಿ ಶುದ್ಧ ಗಾಳಿ ನೀಡುತ್ತದೆ.

ಸ್ನೇಕ್ ಪ್ಲ್ಯಾಂಟ್ (snake plant) : ಇದನ್ನು ಸೂರ್ಯ ಬೆಳಕು ಇಲ್ಲದೆ ಬೆಳೆಸಬಹುದು. ಇವುಗಳನ್ನು ಮನೆಯೊಳಗೆ ನೆಡುವುದರಿಂದ ತುಂಬಾ ಒಳ್ಳೆಯದು.

ಪೋಟೋಸ್ ಸಸ್ಯ (pothos plant) : ಇದಕ್ಕೂ ಕೂಡ ಸೂರ್ಯನ ಬೆಳಕಿನ ಅವಶ್ಯಕತೆ ಇಲ್ಲ. ಇದನ್ನು ಮನೆಯಲ್ಲಿ ಎಲ್ಲಿ ಬೇಕದರೂ ನೆಡಬಹುದು. ಇದು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಶುದ್ಧ ಗಾಳಿಯನ್ನು ಒದಗಿಸುತ್ತದೆ.

ಜಿಜಿ ಸಸ್ಯ (Zizi Plant) : ಇದಕ್ಕೆ ಸೂರ್ಯನ ಬೆಳಕಿನ ಅವಶ್ಯಕತೆ ಇರದ ಕಾರಣ ಇದನ್ನು ಮನೆಯೊಳಗೆ ನೆಡಬಹುದು. ಇದನ್ನು ಮನೆಯಲ್ಲಿ ಎಲ್ಲಿಯಾದರೂ ಇಡಬಹುದು. ಆದರೆ ತೇವಾಂಶ ಇರಬೇಕು. ಇದರಿಂದ ಮನೆಯ ವಾತಾವರಣ ತಂಪಾಗಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read