ಬೆಂಗಳೂರು : ಬೆಂಗಳೂರಿನಲ್ಲಿ ಅಲ್ ಖೈದಾ ಉಗ್ರ ಸಂಘಟನೆಯ ನಾಯಕಿಯನ್ನು ಬಂಧಿಸಲಾಗಿದೆ. ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಅಲ್-ಖೈದಾ (AQIS) ಸಂಯೋಜಿತ ಭಯೋತ್ಪಾದಕ ಘಟಕದ ಹಿಂದಿನ ಪ್ರಮುಖ ಸಂಚುಕೋರಳನ್ನು ಬಂಧಿಸಿದೆ. ಆರೋಪಿಯನ್ನು 30 ವರ್ಷದ ಶಮಾ ಪರ್ವೀನ್ ಎಂದು ಗುರುತಿಸಲಾಗಿದೆ.
ಅಲ್ ಖೈದಾ ಸಂಘಟನೆಯ ನಾಯಕಿ ಶಮಿ ಪರ್ವೀನ್ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.ಈಕೆ ಬೆಂಗಳೂರಿನಿಂದಲೇ ಉಗ್ರಗ್ರಾಮಿಗಳ ನೇಮಕ ಮಾಡುವುದು ಸೇರಿದಂತೆ ವಿವಿಧ ಉಗ್ರ ಚಟುವಟಿಕೆ ನಡೆಸುತ್ತಿದ್ದಳು. ಖಚಿತ ಮಾಹಿತಿ ಮೇರೆಗೆ ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಜಾರ್ಖಂಡ್ ಮೂಲದ ಶರ್ಮಾ ಪರ್ವಿನ್ ಬೆಂಗಳೂರಿನಲ್ಲಿ ನೆಲೆಸಿದ್ದಳು. ಉಗ್ರ ಸಂಘಟನೆ ಬಲಗೊಳಿಸಲು ಈಕೆ ಕೆಲಸ ಮಾಡುತ್ತಿದ್ದಳು. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಈಕೆಯನ್ನು ಬಂಧಿಸಲಾಗಿದೆ. ಹಾಗೂ ಆಕೆ ಮನೆಯಲ್ಲಿದ್ದ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಕೂಡ ಜಪ್ತಿ ಮಾಡಲಾಗಿದೆ. 3 ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದ ಈಕೆ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಸಹೋದರನ ಮನೆಯಲ್ಲಿ ನೆಲೆಸಿದ್ದಳು.