ಚಳಿಗಾಲದಲ್ಲಿ ಕಾಡುತ್ತೆ ಆಲಸ್ಯ; ಚಟುವಟಿಕೆಯಿಂದಿರಲು ಅನುಸರಿಸಿ ಈ ಟಿಪ್ಸ್‌

ಚಳಿಗಾಲ ಬಂದೇಬಿಟ್ಟಿದೆ. ಚುಮು ಚುಮು ಚಳಿಯಲ್ಲಿ ಸೋಮಾರಿತದ ಸಮಸ್ಯೆಯೂ ಹೆಚ್ಚು. ಬೆಳಗ್ಗೆ ಬೇಗನೆ ಎದ್ದೇಳುವುದು ಕಷ್ಟ. ಯಾವಾಗಲೂ ಹೊದ್ದು ಮಲಗಿಬಿಡೋಣ ಎಂಬಂತಹ ಸೋಮಾರಿತನ ಕಾಡುತ್ತದೆ. ಇದರಿಂದ ನಮ್ಮ ಕೆಲಸಕ್ಕೆ ತೊಂದರೆಯಾಗಬಹುದು.

ಚಳಿಗಾಲದಲ್ಲಿ ಕಾಡುವ ಇಂತಹ ಸೋಮಾರಿತನವನ್ನು ದೂರವಿಡಲು ನೀವು ಕೆಲವೊಂದು ವಿಧಾನಗಳನ್ನು ಅನುಸರಿಸಬೇಕು. ಚಳಿಗಾಲದಲ್ಲಿ ಹಗಲು ಕಡಿಮೆ. ಬೇಗನೆ ಕತ್ತಲಾಗುವುದರಿಂದ ನಮ್ಮ ದೇಹದಲ್ಲಿ ಹೆಚ್ಚು ನಿದ್ರೆಯ ಹಾರ್ಮೋನುಗಳು ಉತ್ಪತ್ತಿಯಾಗುತ್ತವೆ. ನಾವು ದಿನವಿಡೀ ಕೆಲಸ ಮಾಡಿ ದಣಿದಿರುತ್ತೇವೆ, ಚೆನ್ನಾಗಿ ನಿದ್ದೆ ಮಾಡಲು ಬಯಸುತ್ತೇವೆ.

ಚಳಿಗಾಲದಲ್ಲಿ ಮುಂಜಾನೆ ಬೇಗ ಅಲಾರಾಂ ಇಟ್ಟುಕೊಳ್ಳಿ. ಅಲಾರಾಂ ಸೌಂಡ್‌ ಕಡಿಮೆ ಇದ್ದರೆ ಗಾಢ ನಿದ್ದೆಯಲ್ಲಿದ್ದಾಗ ಅದು ಕೇಳಿಸುವುದೇ ಇಲ್ಲ. ಹಾಗಾಗಿ ಅಲಾರಾಂ ಸೌಂಡ್‌ ಅನ್ನು ಸ್ವಲ್ಪ ಜಾಸ್ತಿ ಇಟ್ಟುಕೊಂಡು, ಸರಿಯಾದ ಸಮಯಕ್ಕೆ ನಿದ್ದೆಯಿಂದ ಏಳಲು ಪ್ರಯತ್ನಿಸಿ. ಹಾಸಿಗೆಯಿಂದ ಎದ್ದ ನಂತರವೂ ಆಕಳಿಕೆ ಬರುತ್ತಲೇ ಇರುತ್ತದೆ. ಕೆಲಸ ಮಾಡಲು ಆಲಸ್ಯ, ನಿದ್ದೆ ಬಂದಂತಾಗುವುದು ಕಾಮನ್.

ಈ ಸಮಸ್ಯೆಯಿಂದ ಪಾರಾಗಲು ವ್ಯಾಯಾಮ ಉತ್ತಮ ಮಾರ್ಗ. ವ್ಯಾಯಾಮ ಮಾಡುವುದರಿಂದ ದೇಹವು ಸಡಿಲವಾಗುತ್ತದೆ, ಆಲಸ್ಯವೂ ದೂರವಾಗುತ್ತದೆ. ನೀವು ಯಾವುದೇ ಕೆಲಸವನ್ನು ಮಾಡುತ್ತಿದ್ದರೆ ಕಂಬಳಿ ಅಥವಾ ರಗ್‌ ಹೊದ್ದುಕೊಂಡು ಕೂರಬೇಡು. ಏಕೆಂದರೆ ಅದರಿಂದ ಹೊರಬಂದಾಕ್ಷಣ ಚಳಿಯಾಗುತ್ತದೆ. ಸೋಮಾರಿತನ ದೂರವಾಗುತ್ತದೆ ಮತ್ತು ಕೆಲಸ ಸುಲಭವಾಗಿ ಸಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read