ಲಾಯರ್ ಜಗದೀಶ್ ಸಾವು ಪ್ರಕರಣಕ್ಕೆ ಟ್ವಿಸ್ಟ್!

ಬೆಂಗಳೂರು: ವಕೀಲ ಜಗದೀಶ್ ಸಾವು ಪ್ರಕರಣಕ್ಕೆ ಪೊಲೀಸ್ ತನಿಖೆ ವೇಳೆ ಟ್ವಿಸ್ಟ್ ಸಿಕ್ಕಿದೆ. ಅಪಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ವಕೀಲ ಜಗದೀಶ್ ಶನಿವಾರ ರಾತ್ರಿ ರಕ್ತಸಿಕ್ತ ಸ್ಥಿತಿಯಲ್ಲಿ ನೈಸ್ ರಸ್ತೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಜಗದೀಶ್ ಸಹೋದರ, ಜಗದೀಶ್ ಕೊಲೆಯಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ತನಿಖೆ ನಡೆಸಿರ್ಯ್ವ ಪೊಲೀಸರಿಗೆ ಸಾವಿನ ರಹಸ್ಯ ಬಯಲಾಗಿದೆ.

ವಕೀಲ ಜಗದೀಶ್ ಸಾವಿಗೆ ರೋಡ್ ರೇಜ್ ಕಾರಣವಿರಬಹುದು ಎನ್ನಲಾಗಿದೆ. ಅಪಘಾತದಲ್ಲಿ ಅವರು ಮೃತಪಟ್ಟಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದೆ.

ವಕೀಲ ಜಗದೀಶ್ ನೈಸ್ ರಸ್ತೆಯಲ್ಲಿ ತೆರಳುತ್ತಿದ್ದಾಗ ಅವರ ಕಾರಿಗೆ ಲಾರಿಯೊಂದು ಟಚ್ ಆಗಿದೆ. ಸ್ವಲ್ಪ ದೂರ ಹೋಗಿ ಲಾರಿ ಚಾಲಕ ಗಾಡಿ ನಿಲ್ಲಿಸಿದ್ದಾನೆ. ಈ ವೇಳೆ ಕಾರು ನಿಲ್ಲಿಸಿ ಜಗದೀಶ್ ಲಾರಿ ಬಳಿ ಹೋಗಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಮಾತಿನ ಬರದಲ್ಲಿ ಜಗದೀಶ್ ನಡುರಸ್ತೆಗೆ ಬ್ಂದಿದ್ದಾರೆ. ಈ ವೇಳೆ ವೇಗವಾಗಿ ಬರುತ್ತಿದ್ದ ಲಾರಿಯೊಂದರ ಹಿಂಬದಿ ಭಾಗ ಜಗದೀಶ್ ಗೆ ಟಚ್ ಆಗಿದೆ. ಕೆಳಗೆ ಬಿದ್ದ ಜಗದೀಶ್ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಲಾರಿ ಚಾಲಕನಿಗೆ ಹಿಂಬದಿ ಏನೋ ತಾಗಿದೆ ಎಂದು ಅನಿಸಿದಾಗ ಕೆಅ ದೂರ ಸಾಗಿ ಲಾರಿ ನಿಲ್ಲಿಸಿ ನೋಡಿದ್ದಾನೆ. ಅದರೆ ನೂ ಕಂಡುಬಂದಿಲ್ಲ. ಹೀಗಾಗಿ ಆತ ಮತ್ತೆ ಲಾರಿ ಚಲಾಯ್ಸಿಕೊಂಡು ಸಾಗಿದ್ದಾನೆ. ಇತ್ತ ಜಗದೀಶ್ ಅಪಘಾತದಿಂದ ಸಾವನ್ನಪ್ಪಿದ್ದಾರೆ.

ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸಿರುವ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read