ನಾಶಿಕ್ನಲ್ಲಿ ರಾಜ್ಯ ಸಚಿವ ಗೋಪಿಚಂದ್ ಪಡಲ್ಕರ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಪೋಸ್ಟರ್ ಕಂಡುಬಂದ ಒಂದು ದಿನದ ನಂತರ, ಜೈಲಿನಲ್ಲಿರುವ ಅಪರಾಧಿಯ ಫೋಟೋ ಪ್ರದರ್ಶಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ರಾಜ್ಯದಲ್ಲಿ ಯಾವುದೇ ಗ್ಯಾಂಗ್ಸ್ಟರ್ಗಳ ವೈಭವೀಕರಣವನ್ನು ಸರ್ಕಾರ ಸಹಿಸುವುದಿಲ್ಲ ಎಂದು ಫಡ್ನವೀಸ್ ಒತ್ತಿ ಹೇಳಿದರು.
ಬುಧವಾರ, ನಾಶಿಕ್ನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಎಂಎಲ್ಸಿ ಗೋಪಿಚಂದ್ ಪಡಲ್ಕರ್ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದಾಗ ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಪೋಸ್ಟರ್ ಕಂಡುಬಂದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬುಧವಾರ ನಾಶಿಕ್ನ ಸಿಡ್ಕೊ ಪ್ರದೇಶದಲ್ಲಿ ಪಡಲ್ಕರ್ ‘ಹಿಂದು ವಿರಾಟ್ ಮೋರ್ಚಾ’ವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಬಿಷ್ಣೋಯ್ ಫೋಟೋ ಇರುವ ಪೋಸ್ಟರ್ ಅನ್ನು ಏಕೆ ಹಾಕಲಾಯಿತು ಎಂಬ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.