ನವದೆಹಲಿ: ಸಣ್ಣ ಉಳಿತಾಯ ಯೋಜನೆ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಪ್ರಸಕ್ತ ವರ್ಷದ ತೃತೀಯ ತ್ರೈಮಾಸಿಕದಿಂದಲೇ ಅನ್ವಯವಾಗುವಂತೆ ಸಣ್ಣ ಉಳಿತಾಯ ಯೋಜನೆ ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ.
ಸಾರ್ವಜನಿಕ ಭವಿಷ್ಯ ನಿಧಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ. 5 ವರ್ಷದ ರಾಷ್ಟ್ರೀಯ ಉಳಿತಾಯ ಪತ್ರಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಲಾಗಿದೆ. ಈ ಬದಲಾವಣೆ ಅನ್ವಯ ಹಿರಿಯ ನಾಗರೀಕರ ಉಳಿತಾಯ ಯೋಜನೆಯನ್ನು ಪಿಂಚಣಿ ಜಾರಿ ಆದೇಶದ ದಿನಾಂಕದಿಂದ ಒಂದು ತಿಂಗಳ ಬದಲಾಗಿ ಮೂರು ತಿಂಗಳ ಒಳಗೆ ತೆರೆಯಬಹುದಾಗಿದೆ. ಯೋಜನೆ ಮುಕ್ತಾಯವಾಗುವ ಹಂತದಲ್ಲಿ ಅನ್ವಯವಾಗುವ ಬಡ್ಡಿ ದರ ನೀಡಲಾಗುತ್ತದೆ.
5 ವರ್ಷಗಳ ರಾಷ್ಟ್ರೀಯ ಉಳಿತಾಯ ಪತ್ರದ ನಿಶ್ಚಿತ ಠೇವಣಿಯನ್ನು 4 ವರ್ಷಗಳ ಬಳಿಕ ಅವಧಿ ಪೂರ್ವವಾಗಿ ಹಿಂದೆ ಪಡೆಯಲು ಬಯಸಿದಲ್ಲಿ 3 ವರ್ಷಗಳ ನಿಶ್ಚಿತ ಠೇವಣಿಗೆ ಬಡ್ಡಿ ದರ ಬದಲಾಗಿ ಅಂಚೆ ಕಚೇರಿ ಉಳಿತಾಯ ಖಾತೆಯ ಬಡ್ಡಿದರ ಮಾತ್ರ ನೀಡಲಾಗುವುದು.
ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಗೆ ತಿದ್ದುಪಡಿ ತರಲಾಗಿದ್ದು, ಸಾರ್ವಜನಿಕ ಭವಿಷ್ಯ ನಿಧಿ ತಿದ್ದುಪಡಿ ಯೋಜನೆ 2023 ಎಂದು ಹೆಸರಿಸಲಾಗಿದೆ.