ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಉದ್ಯೋಗಿಗಳಿಗೆ ಶುಭ ಸುದ್ದಿ ಇಲ್ಲಿದೆ. ಭಾರತೀಯ ಕಂಪನಿಗಳು ಪ್ರಸಕ್ತ ವರ್ಷ ಉದ್ಯೋಗಿಗಳ ವೇತನವನ್ನು ಎರಡು ಅಂಕಿಯಲ್ಲಿ ಹೆಚ್ಚಳ ಮಾಡಲು ತಯಾರಿ ನಡೆಸುತ್ತಿವೆ. ಈ ವರ್ಷ ಸರಾಸರಿ ಶೇಕಡ 10.3 ರಷ್ಟು ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ.
ಕಳೆದ ವರ್ಷ 10.6 ರಷ್ಟು ವೇತನ ಏರಿಕೆಯಾಗಿತ್ತು. ಜಗತ್ತಿನಾದ್ಯಂತ ಹಲವಾರು ಸಂಸ್ಥೆಗಳು ವಿವಿಧ ಕಾರಣಗಳಿಂದ ಉದ್ಯೋಗಿಗಳನ್ನು ವಜಾ ಮಾಡುತ್ತಿರುವ ಸಮಯದಲ್ಲಿ, ಪ್ರಮುಖ ಜಾಗತಿಕ ವೃತ್ತಿಪರ ಸೇವಾ ಸಂಸ್ಥೆ ಎಯಾನ್ ಹೆವಿಟ್ ಗ್ಲೋಬಲ್ ವರದಿಯು ಗುರುವಾರ ಭಾರತದಲ್ಲಿ ಉದ್ಯೋಗಿಗಳ ವೇತನವು 10.3 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹೇಳಿದೆ.
ತಂತ್ರಜ್ಞಾನ ವೇದಿಕೆ ಮತ್ತು ಉತ್ಪನ್ನಗಳು: 10.9%
ಜಾಗತಿಕ ಸಾಮರ್ಥ್ಯ ಕೇಂದ್ರಗಳು: 10.8%
ತಂತ್ರಜ್ಞಾನ ಕನ್ಸಲ್ಟಿಂಗ್ ಮತ್ತು ಸೇವೆಗಳು: 10.7%
ಹಣಕಾಸು ಸಂಸ್ಥೆಗಳು: 10.1%
ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ (FMCG)/ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಡ್ಯೂರಬಲ್ಸ್ (FMCD): 10.1%
ಉತ್ಪಾದನೆ: 9.9%
ಜೀವ ವಿಜ್ಞಾನ: 9.7%
ಚಿಲ್ಲರೆ: 9.7%
ವೃತ್ತಿಪರ ಸೇವೆಗಳು: 11.2%
ಇ-ಕಾಮರ್ಸ್: 12.2%
ಇತರೆ ಸೇವೆಗಳು: 9.6%
ಕಳೆದ ವರ್ಷಕ್ಕಿಂತ ಸ್ವಲ್ಪ ಕಡಿಮೆಯಾದರೂ, ಆರ್ಥಿಕ ಚಂಚಲತೆಯ ಬಗ್ಗೆ ಕಳವಳದ ಹೊರತಾಗಿಯೂ ಯೋಜಿತ ಹೆಚ್ಚಳವು ಎರಡಂಕಿಗಳಲ್ಲಿ ಮುಂದುವರಿಯುತ್ತದೆ.