ಬೆಂಗಳೂರು: ಅಮುಲ್ ಜೊತೆ ಕೆಎಂಎಫ್ ನಂದಿನಿ ವಿಲೀನಗೊಳಿಸುವ ಪ್ರಸ್ತಾಪವೇ ಇಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಯಾರೇ ಸ್ಪರ್ಧೆ ಮಾಡಿದರೂ ನಂದಿನಿ ಬ್ರಾಂಡ್ ಅಳಿಸುವುದು ಅಸಾಧ್ಯ. ಕರ್ನಾಟಕದಲ್ಲಿ 15 ಹಾಲು ಒಕ್ಕೂಟಗಳಿದ್ದು, ಎಲ್ಲವೂ ಲಾಭದಲ್ಲಿವೆ. ಗುಜರಾತ್ ಮಾದರಿ ಅನುಸರಿಸಿದರೆ ಇನ್ನಷ್ಟು ಬೆಳೆಸಲು ಸಾಧ್ಯ ಎನ್ನುವ ಚಿಂತನೆ ಇದೆ ಎಂದು ಹೇಳಿದ್ದಾರೆ.
ಅಳಿಸಲು ಸಾಧ್ಯವಾಗದಂತೆ ನಂದಿನಿಗೆ ಭದ್ರಬುನಾದಿ ಇದೆ. ಹಾಲು, ಹಾಲಿನ ಉತ್ಪನ್ನದ ವಿಚಾರದಲ್ಲಿ ಕೃತಕ ಅಭಾವ ಸೃಷ್ಟಿಸಿಲ್ಲ. ಬೇಸಿಗೆ ಆಗಿರುವುದರಿಂದ ಹಾಲು ಉತ್ಪಾದನೆ ಕಡಿಮೆಯಾಗಿದೆ. ಅಮುಲ್ ಹೆಸರಿನಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.