ಬೆಂಗಳೂರು: ಕೃಷಿ ಉತ್ಪನ್ನಗಳ ಮಾರಾಟಕ್ಕೆ ನಂದಿನಿ ಹಾಲಿನ ಕೇಂದ್ರಗಳ ಪಕ್ಕದಲ್ಲೇ ರೈತರ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು ‘ಅಮೃತ ಮಳಿಗೆ’ಗಳನ್ನು ಆರಂಭಿಸಲಾಗುವುದು.
ಕೃಷಿ ಉತ್ಪನ್ನಗಳ ಮಾರಾಟಕ್ಕೆ ಪ್ರೋತ್ಸಾಹ ಮತ್ತು ಸೂಕ್ತ ಮಾರುಕಟ್ಟೆ, ಕಲ್ಪಿಸುವ ಉದ್ದೇಶದಿಂದ ಜಲಾನಯನ ಅಭಿವೃದ್ಧಿ ಇಲಾಖೆ ಮತ್ತು ಕೃಷಿ ಇಲಾಖೆ ಜಂಟಿಯಾಗಿ ರಾಜ್ಯದ 18 ಕಡೆ ನಂದಿನಿ ಹಾಲಿನ ಕೇಂದ್ರಗಳ ಬಳಿ ಅಮೃತ ಮಳಿಗೆಗಳನ್ನು ಆರಂಭಿಸಲಾಗುವುದು ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ತಿಳಿಸಿದ್ದಾರೆ.
ಆರಂಭಿಕವಾಗಿ 18 ಕಡೆ ಅಮೃತ ಮಳಿಗೆಗಳನ್ನು ಆರಂಭಿಸಲಾಗುವುದು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ಕೃಷಿ ಉತ್ಪನ್ನಗಳು ನೇರವಾಗಿ ಗ್ರಾಹಕರಿಗೆ ಸಿಗುತ್ತವೆ ಎಂದು ಹೇಳಲಾಗಿದೆ.