ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಸಂಭಾವ್ಯ ಸಾಲ ಯೋಜನೆ ಪಟ್ಟಿ ಬಿಡುಗಡೆ

ಬಳ್ಳಾರಿ: ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ 2024-25ನೇ ಸಾಲಿನ ಸಂಭಾವ್ಯ ಸಾಲ ಯೋಜನೆಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಬಿಡುಗಡೆಗೊಳಿಸಿದರು.

ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಆರ್.ಎಸ್.ಯುವರಾಜ ಕುಮಾರ್ ಮಾತನಾಡಿ, ಬೆಳೆ ಸಾಲಕ್ಕಾಗಿ 2551.58 ಕೋಟಿ ರೂ., ಕೃಷಿ ದೀರ್ಘಾವಧಿ ಸಾಲಕ್ಕೆ 1038.79 ಕೋಟಿ ರೂ., ಕೃಷಿ ಮೂಲಸೌಕರ್ಯಕ್ಕಾಗಿ 75.78 ಕೋಟಿ ರೂ., ಕೃಷಿ ಪೂರಕ ಚಟುವಟಿಕೆಗಳಿಗೆ 250.18 ಕೋಟಿ ರೂ., ಒಟ್ಟಾಗಿ ಕೃಷಿ ಕ್ಷೇತ್ರಕ್ಕೆ 3916.33 ಕೋಟಿ ರೂ., ನಷ್ಟು 2024-25 ವರ್ಷಕ್ಕೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಸೂಕ್ಷ್ಮ ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ 2661.38 ಕೋಟಿ ರೂ., ರಫ್ತುಗೆ 25.60 ಕೋಟಿ ರೂ., ಶಿಕ್ಷಣಕ್ಕೆ 56.70 ಕೋಟಿ ರೂ., ವಸತಿ ಸೌಕರ್ಯಕ್ಕೆ 119.60 ಕೋಟಿ ರೂ., ನವೀಕರಿಸಬಹುದಾದ ಶಕ್ತಿಗೆ 3.04 ಕೋಟಿ ರೂ., ಮತ್ತು ಸಾಮಾಜಿಕ ಮೂಲಸೌಕರ್ಯಕ್ಕೆ 13.47 ಕೋಟಿ ರೂ., ಇತರೆ ಚಟುವಟಿಕೆಗಳಿಗೆ 95.70 ಕೋಟಿ ರೂ., ಯನ್ನು ನಿಗದಿಪಡಿಸಲಾಗಿದೆ. ಒಟ್ಟಾರೆ ಆದ್ಯತಾ ವಲಯಕ್ಕೆ 6891.82 ಕೋಟಿ ರೂ. ನಿಗದಿಪಡಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಆರ್‌ಬಿಐನ ಎಲ್ ಡಿಒಎಂ. ಪಾಠಕ್, ಸೋಮನಗೌಡ ಐನಾಪುರ, ವಿವಿಧ ಬ್ಯಾಂಕ್ ಗಳ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read