ವಾಷಿಂಗ್ಟನ್: ಆರ್ಥಿಕ ಹಿಂಜರಿತ ಪರಿಣಾಮ ಕಳೆದ ಮೂರು ತಿಂಗಳಲ್ಲಿ 1.5 ಲಕ್ಷ ಉದ್ಯೋಗ ಕಡಿತವಾಗಿವೆ. ಕಳೆದ ವರ್ಷ ಜಾಗತಿಕ ಮಟ್ಟದಲ್ಲಿ ಆರಂಭವಾಗಿದ್ದ ಉದ್ಯೋಗ ಕಡಿತ 2023ರಲ್ಲೂ ಮುಂದುವರೆದಿದೆ. ಈ ವರ್ಷದ ಮೊದಲ ಮೂರು ತಿಂಗಳ ಅವಧಿಯಲ್ಲಿ ಮಾಹಿತಿ ತಂತ್ರಜ್ಞಾನ ವಲಯ ಒಂದರಲ್ಲಿಯೇ ಸುಮಾರು 1.5 ಲಕ್ಷ ಉದ್ಯೋಗ ಕಡಿತ ಮಾಡಲಾಗಿದೆ.
ಜಾಗತಿಕ ಉದ್ಯೋಗ ಕಡಿತದ ಮೇಲೆ ನಿಗಾ ಇಡುವ ವೆಬ್ಸೈಟ್ ಪ್ರಕಾರ ಅಮೆಜಾನ್ ಮತ್ತು ಮೆಟಾ ಸೇರಿದಂತೆ ಹಲವು ಕಂಪನಿಗಳು ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳನ್ನು ವಜಾಗೊಳಿಸಿವೆ. ಅಮೆಜಾನ್ ಕಳೆದ ಜನವರಿಯಲ್ಲಿ 18,000 ಉದ್ಯೋಗಿಗಳನ್ನು ಕೈ ಬಿಟ್ಟಿದ್ದು, ಮತ್ತೆ 9 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಘೋಷಣೆ ಮಾಡಿದೆ. ಮೆಟಾ 10,000, ಗೂಗಲ್ 12,000, ಮೈಕ್ರೋಸಾಫ್ಟ್ 10,000 ಸಿಬ್ಬಂದಿಗಳನ್ನು ವಜಾಗೊಳಿಸಿವೆ.