ನವದೆಹಲಿ: 2022-23 ನೇ ಸಾಲಿನ ಆದಾಯ ತೆರಿಗೆ ವಿವರ -ಐಟಿಆರ್ ಸಲ್ಲಿಸುವ ಅವಧಿಯನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ.
ಬಡ್ಡಿ ಹಾಗೂ ನಿಗದಿತ ದಂಡ ಶುಲ್ಕದೊಂದಿಗೆ ಆದಾಯ ತೆರಿಗೆ ವಿವರ ಸಲ್ಲಿಸಬಹುದಾಗಿದೆ. ವೈಯಕ್ತಿಕ ಹಾಗೂ ಕಾರ್ಪೊರೇಟ್ ಸಹಿತ ಎಲ್ಲಾ ವಿಭಾಗಗಳಿಗೆ ಈ ವಿಸ್ತರಣೆ ಅನ್ವಯವಾಗುತ್ತದೆ. 2022 -23ನೇ ಆರ್ಥಿಕ ವರ್ಷದ, 2023- 24ನೇ ಅಸೆಸ್ಮೆಂಟ್ ವರ್ಷದ ಐಟಿಆರ್ ಸಲ್ಲಿಕೆಗಳು 2023ರ ಜುಲೈ 31 ರಂದು ಕೊನೆಯಾಗಿತ್ತು.
ಐಟಿಆರ್ ಸಲ್ಲಿಸಲು ವಿಫಲರಾದ ವೈಯಕ್ತಿಕ ಆದಾಯ ತೆರಿಗೆದಾರರು ಡಿಸೆಂಬರ್ 31ರೊಳಗೆ ಸಲ್ಲಿಸಬಹುದೆಂದು ತಿಳಿಸಲಾಗಿದೆ. ಕಾನೂನಿನ ಅನ್ವಯ ವಿಳಂಬವಾಗಿ ಐಟಿಆರ್ ಸಲ್ಲಿಸುವವರು 5,000 ರೂ. ದಂಡ ಶುಲ್ಕ ಪಾವತಿಸಬೇಕಿದೆ. ಆದರೆ, ವಾರ್ಷಿಕ ಒಟ್ಟು ಆದಾಯ 5 ಲಕ್ಷ ರೂ.ಗಿಂತ ಕೆಳಗಿದ್ದರೆ ದಂಡದ ಪ್ರಮಾಣ 1000 ರೂ. ಇರಲಿದೆ.