ನವದೆಹಲಿ: ಸಾಲ ಮರುಪಾವತಿಯನ್ನು ಮಾನವೀಯ ರೀತಿಯಲ್ಲಿ ನಿಭಾಯಿಸುವಂತೆ ಬ್ಯಾಂಕ್ ಗಳಿಗೆ ಸರ್ಕಾರ ಸೂಚಿಸಿದೆ.
ಸಾಲ ಮರುಪಾವತಿ ಸಮಸ್ಯೆಗಳನ್ನು ಸೂಕ್ಷ್ಮತೆ ಮತ್ತು ಮಾನವೀಯ ಧೋರಣೆಯೊಂದಿಗೆ ನಿಭಾಯಿಸಲು ಸರ್ಕಾರ ಎಲ್ಲಾ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಲೋಕಸಭೆ ಪ್ರಶ್ನೋತ್ತರ ವೇಳೆಯಲ್ಲಿ ಪೂರಕ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಲವು ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ ಗಳು ಸಾಲ ಮರುಪಾವತಿ ವಿಚಾರದಲ್ಲಿ ನಿರ್ದಾಕ್ಷಿಣ್ಯವಾಗಿ ವರ್ತಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಇಂತಹ ಪ್ರಕರಣಗಳನ್ನು ಮಾನವೀಯವಾಗಿ ಎದುರಿಸಲು ಆರ್‌ಬಿಐ ಜೊತೆ ಸಮಾಲೋಚನೆಯೊಂದಿಗೆ ಸೂಕ್ತ ಸೂಚನೆಗಳನ್ನು ಬ್ಯಾಂಕ್ ಗಳಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.