![](https://kannadadunia.com/wp-content/uploads/2021/01/Gold-silver-June-12-780x405-1.jpg)
ನವದೆಹಲಿ: ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. ಚಿನ್ನದ ದರ 615 ರೂ., ಬೆಳ್ಳಿ ದರ 2,285 ರೂ. ಇಳಿಕೆಯಾಗಿದೆ.
ದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ದರ 615 ರೂ. ಕಡಿಮೆಯಾಗಿದ್ದು, 55,095 ರೂ.ಗೆ ತಲುಪಿದೆ. ಬೆಳ್ಳಿ ದರ ಕೆಜಿಗೆ 2285 ರೂ. ಕಡಿಮೆಯಾಗಿದ್ದು, 62,025 ಗೆ ಮಾರಾಟವಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಕಡಿಮೆಯಾಗಿರುವುದು ದೇಶಿಯ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ಬೆಲೆ ಇಳಿಕೆಗೆ ಕಾರಣವಾಗಿದೆ ಎಂದು HDFC ಸೆಕ್ಯೂರಿಟೀಸ್ ತಿಳಿಸಿದೆ.