ಬೆಂಗಳೂರು: ಬೆಳೆ ವಿಮೆಗೆ ನೋಂದಣಿ ಆರಂಭವಾಗಿದೆ. 36 ಬೆಳೆಗಳಿಗೆ ವಿಮೆ ಕಲ್ಪಿಸಲಾಗಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ 36 ಆಹಾರ, ಎಣ್ಣೆಕಾಳು, ವಾರ್ಷಿಕ ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳನ್ನು ವಿಮೆಗೆ ಒಳಪಡಿಸಲಾಗಿದೆ.
ತಾಲೂಕಿನ ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ, ಉಳಿದ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅಧಿಸೂಚಿಸಲಾಗಿದ್ದು, ಶೇಕಡ 2ರಿಂದ 5ರಷ್ಟು ಪ್ರೀಮಿಯಂ ನಿಗದಿ ಮಾಡಲಾಗಿದೆ.
ಜಂಟಿ ಖಾತೆದಾರರು ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಾದ ವಿಸ್ತೀರ್ಣಕ್ಕೆ ಅನುಸಾರ ಬೆಳೆ ವಿಮೆ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಂಬಂಧಿಸಿದ ಸೇರ್ಪಡೆ ಅಥವಾ ಬದಲಾವಣೆಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಗಳಿಗೆ ಭೇಟಿ ನೀಡಬಹುದು. ವಿವಿಧ ಬೆಳೆಗಳಿಗೆ ನೋಂದಣಿಗೆ ಬೇರೆ ಬೇರೆ ಕೊನೆಯ ದಿನಾಂಕ ನಿಗದಿ ಮಾಡಲಾಗಿದ್ದು, ಕೆಲವು ಬೆಳೆಗಳಿಗೆ ಜುಲೈ 31, ಮತ್ತೆ ಕೆಲವು ಬೆಳೆಗಳಿಗೆ ಅಗಸ್ಟ್ 16 ಕೊನೆಯ ದಿನವಾಗಿದೆ.