ನವದೆಹಲಿ: ನಕಲಿ ಔಷಧಗಳನ್ನು ಉತ್ಪಾದಿಸಿದ 18 ಔಷಧ ಸಂಸ್ಥೆಗಳ ಪರವಾನಗಿಯನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಗುರುವಾರ ರದ್ದುಗೊಳಿಸಿದೆ.
ಗುರುವಾರ 20 ರಾಜ್ಯಗಳ 76 ಉದ್ಯಮಗಳನ್ನು ಡಿಜಿಸಿಎ ಪರಿಶೀಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕಂಪನಿಗಳಲ್ಲಿ ಹೆಚ್ಚಿನವು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಕ್ಕೆ ಸೇರಿವೆ. ಮಧ್ಯಪ್ರದೇಶದ ಎರಡು ಮತ್ತು ಹರಿಯಾಣ ಮತ್ತು ಮಹಾರಾಷ್ಟ್ರದ ತಲಾ ಒಂದು ಕಂಪನಿಗಳಿವೆ.
ಉತ್ತರಾಖಂಡ ಮೂಲದ ಸಂಸ್ಥೆಗಳಾದ ಹಿಮಾಲಯ ಮೆಡಿಟೆಕ್, ಮ್ಯಾಸ್ಕಾಟ್ ಹೆಲ್ತ್ ಸೀರೀಸ್ ಮತ್ತು ಪ್ಯೂರ್ ಅಂಡ್ ಕ್ಯೂರ್ ಹೆಲ್ತ್‌ಕೇರ್ ಸಂಸ್ಥೆಗಳ ಪರವಾನಗಿಯನ್ನು ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ. ಹಿಮಾಚಲ ಪ್ರದೇಶದ ಶ್ರೀ ಸಾಯಿ ಬಾಲಾಜಿ ಫಾರ್ಮಾಟೆಕ್ ಮತ್ತು ಮೆಡಿಪೋಲ್ ಫಾರ್ಮಾಸ್ಯುಟಿಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಶೋಕಾಸ್ ಮತ್ತು ಸ್ಟಾಪ್ ಮ್ಯಾನುಫ್ಯಾಕ್ಚರಿಂಗ್ ನೋಟಿಸ್‌ಗಳನ್ನು ಸ್ವೀಕರಿಸಿದೆ, ಆದರೆ ಅನುಸರಣೆಯನ್ನು ಪರಿಶೀಲಿಸಿದ ನಂತರ ಆದೇಶವನ್ನು ಹಿಂಪಡೆಯಲಾಗಿದೆ.
20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 76 ಫಾರ್ಮಾ ಕಂಪನಿಗಳನ್ನು ಪರಿಶೀಲಿಸಲಾಗಿದೆ. ಪರಿಶೀಲನೆಗಾಗಿ ಸುಮಾರು 203 ಸಂಸ್ಥೆಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ, ಕಳಪೆ ಗುಣಮಟ್ಟದ ಔಷಧಗಳನ್ನು ತಯಾರಿಸಿದ ಮತ್ತು ಉತ್ತಮ ಉತ್ಪಾದನಾ ಅಭ್ಯಾಸಗಳ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ 76 ಕಂಪನಿಗಳಿಗೆ 15 ದಿನಗಳಲ್ಲಿ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ.