ಹಲಾಲ್ ಮಾಂಸ ಉತ್ಪನ್ನಗಳ ಪ್ರಮಾಣೀಕರಣಕ್ಕಾಗಿ ಕರಡು ಮಾರ್ಗಸೂಚಿ ಬಿಡುಗಡೆ

ವಾಣಿಜ್ಯ ಸಚಿವಾಲಯವು ಹಲಾಲ್ ಮಾಂಸ ಉತ್ಪನ್ನಗಳ ಪ್ರಮಾಣೀಕರಣಕ್ಕಾಗಿ ಕರಡು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ

ವಾಣಿಜ್ಯ ಸಚಿವಾಲಯದ ಕರಡು ಮಾರ್ಗಸೂಚಿಗಳ ಪ್ರಕಾರ, ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಮಂಡಳಿಯಿಂದ ಮಾನ್ಯತೆ ಪಡೆದ ಪ್ರಮಾಣೀಕರಣ ಸಂಸ್ಥೆ ನೀಡಿದ ಮಾನ್ಯ ಪ್ರಮಾಣಪತ್ರದ ಅಡಿಯಲ್ಲಿ ಉತ್ಪಾದಿಸಿ, ಸಂಸ್ಕರಿಸಿ ಮತ್ತು ಪ್ಯಾಕ್ ಮಾಡಿದರೆ ಮಾತ್ರ ಎಲ್ಲಾ ಮಾಂಸ ಮತ್ತು ಅದರ ಉತ್ಪನ್ನಗಳನ್ನು ‘ಹಲಾಲ್ ಪ್ರಮಾಣೀಕೃತ’ ಎಂದು ರಫ್ತು ಮಾಡಲಾಗುತ್ತದೆ.

ಭಾರತದಿಂದ ಮಾಂಸ ಮತ್ತು ಮಾಂಸ ಉತ್ಪನ್ನಗಳ ರಫ್ತಿಗೆ ಹಲಾಲ್ ಪ್ರಮಾಣೀಕರಣ ಪ್ರಕ್ರಿಯೆಯನ್ನು ಸುಗಮಗೊಳಿಸುವ ಉದ್ದೇಶದಿಂದ, ಮಾಂಸ ಮತ್ತು ಅದರ ಉತ್ಪನ್ನಗಳ ರಫ್ತಿಗೆ ಹಲಾಲ್ ಪ್ರಮಾಣೀಕರಣದ ಕರಡು ಮಾರ್ಗಸೂಚಿಗಳನ್ನು ವಿದೇಶಿ ವ್ಯಾಪಾರದ ಜನರಲ್(DGFT) ಪ್ರಸ್ತಾಪಿಸಿದೆ.

ಭಾರತೀಯ ಅನುಸರಣೆ ಮೌಲ್ಯಮಾಪನ ಯೋಜನೆ(ಐ-ಸಿಎಎಸ್) – ಹಲಾಲ್ ಪ್ರಕಾರ ಪ್ರಮಾಣೀಕರಣ ಸಂಸ್ಥೆಗಳು ನಿಗದಿಪಡಿಸಿದ ವಿಧಾನವನ್ನು ಅನುಸರಿಸುತ್ತವೆ ಎಂದು ಮಾರ್ಗಸೂಚಿಗಳು ಹೇಳಿವೆ.

ಈ ಉದ್ದೇಶಕ್ಕಾಗಿ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವನ್ನು(APEDA) ಒಟ್ಟಾರೆ ಮೇಲ್ವಿಚಾರಣಾ ಸಂಸ್ಥೆಯಾಗಿ ನಿಯೋಜಿಸಲಾಗುವುದು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read