alex Certify ತೊಗರಿ ಬೆಲೆ ಏರಿಕೆಗೆ ಬ್ರೇಕ್: ಸರ್ಕಾರದ ಮಹತ್ವದ ಕ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೊಗರಿ ಬೆಲೆ ಏರಿಕೆಗೆ ಬ್ರೇಕ್: ಸರ್ಕಾರದ ಮಹತ್ವದ ಕ್ರಮ

ನವದೆಹಲಿ: ತೊಗರಿ ಬೆಲೆ ಏರಿಕೆ ತಪ್ಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಆಮದು ಮಾಡಿಕೊಂಡ ತೊಗರಿ ಮಾರುಕಟ್ಟೆಗೆ ಬರುವವರೆಗೆ ಬೆಲೆ ಏರಿಕೆ ತಡೆಯಲು ದಾಸ್ತಾನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.

ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಈ ಕುರಿತಾಗಿ ನಾಫೆಡ್ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟಕ್ಕೆ ಈ ಕುರಿತು ಸೂಚನೆ ನೀಡಿದೆ. ಜೂನ್ 2ರಂದು ಅಗತ್ಯ ಸರಕುಗಳ ಕಾಯ್ದೆ ಜಾರಿಗೊಳಿಸುವ ಮೂಲಕ ತೊಗರಿ ಮತ್ತು ಉದ್ದಿನ ಮೇಲೆ ದಾಸ್ತಾನು ಮಿತಿ ಹೇರಲಾಗಿತ್ತು. ಈ ಆದೇಶದ ಅನ್ವಯ ಎಲ್ಲಾ ರಾಜ್ಯಗಳಿಗೆ ಅಕ್ಟೋಬರ್ 31ರವರೆಗೆ ತೊಗರಿ ಮತ್ತು ಉದ್ದಿನ ದಾಸ್ತಾನು ಮಿತಿ ನಿಗದಿಪಡಿಸಲಾಗಿದೆ. ಸಗಟು ವ್ಯಾಪಾರಿಗಳಿಗೆ 200 ಮೆಟ್ರಿಕ್ ಟನ್, ಚಿಲ್ಲರೆ ವ್ಯಾಪಾರಿಗಳಿಗೆ 5 ಮೆಟ್ರಿಕ್ ಟನ್ ಬೇಳೆ ಕಾಳು ದಾಸ್ತಾನು ಇಟ್ಟುಕೊಳ್ಳಲು ಅವಕಾಶವಿದೆ.

ಬೆಲೆ ಏರಿಕೆ ತಪ್ಪಿಸಲು ದಾಸ್ತಾನಿನಿಂದ ತೊಗರಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಆಮದು ಮಾಡಿಕೊಂಡ ತೊಗರಿ ಮಾರುಕಟ್ಟೆಗೆ ಬರುವವರೆಗೆ ಬೆಲೆ ಏರಿಕೆ ತಪ್ಪಿಸಲು ಈ ಕ್ರಮದಿಂದ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...