ಲಾಸ್ ಏಂಜಿಲೀಸ್‌ನ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ಜೇನ್ನೊಣಗಳ ದಾಳಿಗೆ ತುತ್ತಾಗಿರುವ ವಿಡಿಯೋವೊಂದು ವೈರಲ್ ಆಗಿದೆ.
ಪೊಲೀಸ್ ಅಧಿಕಾರಿಯೊಂದಿಗೆ ಮತ್ತೊಬ್ಬರಿಗೂ ಸಹ ಇದೇ ವೇಳೆ ಜೇನು ಕಡಿತದ ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದ ಎನ್ಸಿನೋ ಪ್ರದೇಶದ ಅಡ್ಲಾನ್ ರಸ್ತೆಯ 17100 ಬ್ಲಾಕ್‌ನಲ್ಲಿ ಜೇನ್ನೊಣಗಳು ಆವರಿಸಿದ್ದನ್ನು ಕೇಳಿ ಸ್ಥಳಕ್ಕೆ ಧಾವಿಸಿದ್ದರು ಈ ಅಧಿಕಾರಿ.
ಜೇನ್ನೊಣಗಳು ಪೊಲೀಸಪ್ಪನನ್ನು ಅಟ್ಟಿಸಿಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಜೇನ್ನೊಣಗಳಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ನೆಲಕ್ಕೆ ಬಿದ್ದ ಈ ಅಧಿಕಾರಿ, ತಮ್ಮ ಕೈಗಳನ್ನು ಬೀಸುತ್ತಾ ಅವುಗಳನ್ನು ಚದುರಿಸಲು ಯತ್ನಿಸಿದರೂ ಸಹ ಅವರ ಮುಖಕ್ಕೆ ಕಚ್ಚಿಬಿಟ್ಟಿವೆ.
https://twitter.com/TrafficNewsLA/status/1658319829508702209?ref_src=twsrc%5Etfw%7Ctwcamp%5Etweetembed%7Ctwterm%5E1658319829508702209%7Ctwgr%5E540e55243dfdadab3cefddd70c825707ba18f9a4%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-lapd-officer-another-man-hospitalised-after-being-stung-severely-by-bees-officer-falls-to-the-ground