ಬೆಂಗಳೂರು : ನಟ ದುನಿಯಾ ವಿಜಯ್ ಅಭಿನಯದ ‘ಲ್ಯಾಂಡ್ ಲಾರ್ಡ್’ ಚಿತ್ರದಲ್ಲಿ ನಟ ರಾಜ್ ಬಿ ಶೆಟ್ಟಿ ನಟಿಸುತ್ತಿದ್ದು, ಇಂದು ಸಿನಿಮಾದ ಟೀಸರ್ ರಿಲೀಸ್ ಆಗಿದೆ. ರಾಜ್ ಬಿ ಶೆಟ್ಟಿ ಪಾತ್ರದ ಲುಕ್ ಹಾಗೂ ಟೀಸರ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ.
ಟೀಸರ್ ನಲ್ಲಿ ರಾಜ್ ಬಿ ಶೆಟ್ಟಿ ಅವರು ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಜನವರಿ 23 ರಂದು ನಟ ದುನಿಯಾ ವಿಜಯ್ ಹುಟ್ಟು ಹಬ್ಬವಿದೆ. ಅಂದೇ ಈ ಸಿನಿಮಾ ತೆರೆಗೆ ಬರಲಿದೆ.
‘ಸಾರಥಿ ಫಿಲಂಸ್’ ಲಾಂಛನದಲ್ಲಿ ಕೆ.ವಿ. ಸತ್ಯಪ್ರಕಾಶ್ – ಹೇಮಂತ್ ಗೌಡ ಕೆ.ಎಸ್ ನಿರ್ಮಿಸಿರುವ, ಜಡೇಶ್ ಕೆ.ಹಂಪಿ ನಿರ್ದೇಶನದ ಹಾಗೂ ದುನಿಯಾ ವಿಜಯ್, ರಚಿತರಾಮ್ ಅಭಿನಯದ ‘ಲ್ಯಾಂಡ್ ಲಾರ್ಡ್’ ಚಿತ್ರ ಬಹಳ ನಿರೀಕ್ಷೆ ಮೂಡಿಸಿದೆ.
