ಉದ್ಘಾಟನೆ ದಿನವೇ ಹೊಸ ಸಂಸತ್ ಭವನ ಶವದ ಪೆಟ್ಟಿಗೆಗೆ ಹೋಲಿಸಿದ RJD; ವಿವಾದಾತ್ಮಕ ಟ್ವೀಟ್

ನವದೆಹಲಿ: ನೂತನ ಸಂಸತ್ ಭವನದ ಉದ್ಘಾಟನೆ ಕುರಿತಂತೆ ನಡೆಯುತ್ತಿರುವ ವಿವಾದಗಳ ನಡುವೆಯೇ ಪ್ರತಿಪಕ್ಷಗಳು ದಾಳಿಯನ್ನು ತೀವ್ರಗೊಳಿಸಿವೆ.

ಇದೀಗ ಲಾಲು ಯಾದವ್ ಅವರ ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ವಿವಾದಾತ್ಮಕ ಟ್ವೀಟ್ ಮಾಡಿದ್ದು, ಹೊಸ ಸಂಸತ್ ಭವನದ ರಚನೆಯನ್ನು ಶವಪೆಟ್ಟಿಗೆಯೊಂದಿಗೆ ಹೋಲಿಸಿದೆ. ಪಕ್ಷವು “ಇದು ಏನು?” ಶೀರ್ಷಿಕೆಯಲ್ಲಿ ವಿವಾದಾತ್ಮಕ ಟ್ವೀಟ್‌ನಲ್ಲಿ ಹೊಸ ಸಂಸತ್ತಿನ ರಚನೆಯನ್ನು ಶವಪೆಟ್ಟಿಗೆಯೊಂದಿಗೆ ಹೋಲಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೊಸ ಸಂಸತ್ ಭವನವನ್ನು ಉದ್ಘಾಟಿಸಿ ಲೋಕಸಭಾ ಸ್ಪೀಕರ್ ಕುರ್ಚಿ ಬಳಿ ಐತಿಹಾಸಿಕ ‘ಸೆಂಗೊಲ್’ ಸ್ಥಾಪಿಸಿದ ನಂತರ ಈ ಬೆಳವಣಿಗೆ ನಡೆದಿದೆ.

https://twitter.com/RJDforIndia/status/1662659949414203392

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read