ಫ್ಲವರ್ ಶೋಗೆ ತೆರಳುವವರಿಗೆ ಇಂದು ನಮ್ಮ ಮೆಟ್ರೋದಿಂದ ಸ್ಪೆಷಲ್ ಆಫರ್…!

ಬೆಂಗಳೂರು: ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಆರಂಭವಾಗಿರುವ ಫ್ಲವರ್ ಶೋ ಗೆ ಇಂದು ಕೊನೇ ದಿನ. 77ನೇ ಸ್ವತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ಫ್ಲವರ್ ಶೋಗೆ ಇಂದು ತೆರೆ ಬೀಳುತ್ತಿದೆ. ಅಲ್ಲದೇ ಇಂದು ಶಾಲೆ ಹಾಗೂ ಕಚೇರಿಗಳಿಗೆ ರಜೆ ಇರುವುದರಿಂದ ಫಲಪುಷ್ಪ ಪ್ರದರ್ಶನಕ್ಕೆ ಜನಸಾಗರವೇ ಹರಿದು ಬರುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸ್ಪೆಷಲ್ ಆಫರ್ ನೀಡಿದೆ.

ಇಂದು ಫ್ಲವರ್ ಶೋ ನೋಡಲು ಹೋಗುವವರಿಗೆ ಮೆಟ್ರೋದಿಂದ ವಿಶೇಷ ಆಫರ್ ನೀಡಲಾಗುತ್ತಿದೆ. ಲಾಲ್ ಬಾಗ್ ಮೆಟ್ರೋ ನಿಲ್ದಾಣದಿಂದ ಎಲ್ಲಿಗೆ ಪ್ರಯಾಣಿಸಿದರೂ ಕೇವಲ 30 ರೂಪಾಯಿ ಮಾತ್ರ ಚಾರ್ಜ್ ಮಾಡಲಾಗುತ್ತದೆ.

ಅಲ್ಲದೇ ಫ್ಲವರ್ ಶೋ ವೀಕ್ಷಿಸಲು ಬರುವವರಿಗೆ ಪೇಪರ್ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪೇಪರ್ ಟಿಕೆಟ್ ಖರೀದಿಸಲು ಅವಕಾಶವಿದ್ದು, ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿಯೂ ಪೇಪರ್ ಟಿಕೆಟ್ ನೀಡಲಾಗುತ್ತಿದೆ.

ಈ ಟಿಕೆಟ್ ಮೂಲಕ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮೆಟ್ರೋದಲ್ಲಿ ಎಲ್ಲಿ ಬೇಕಾದರೂ ಪ್ರಯಾಣಿಸಬಹುದಾಗಿದೆ. ಫ್ಲವರ್ ಶೋ ಕೊನೇ ದಿನ ಹಿನ್ನೆಲೆಯಲ್ಲಿ ಈ ವಿಶೇಷ ವ್ಯವಸ್ಥೆಯನ್ನು ಬಿ.ಎಂ.ಆರ್.ಸಿ.ಎಲ್ ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read