ಗಂಡಸ್ತನ ತೋರಿಸಲು ಹೋಗಿ ಸಚಿವ ಸ್ಥಾನ ಕಳೆದುಕೊಂಡಿದ್ದು ಜಗಜ್ಜಾಹೀರು: ರಮೇಶ್ ಜಾರಕಿಹೊಳಿ ಬಗ್ಗೆ ಸವದಿ ಲೇವಡಿ

ಬೆಳಗಾವಿ: ಗಂಡಸ್ತನ ತೋರಿಸಲು ಹೋಗಿ ಸಚಿವ ಸ್ಥಾನ ಕಳೆದುಕೊಂಡಿದ್ದು ಜಗಜ್ಜಾಹೀರಾಗಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಲೇವಡಿ ಮಾಡಿದ್ದಾರೆ.

ಅಥಣಿ ತಾಲೂಕಿನ ಯಲಿಹಡಲಗಿ, ಅಡಹಳ್ಳಿ ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರಚಾರ ನಡೆಸಿದ ಲಕ್ಷ್ಮಣ ಸವದಿ ಮಾತನಾಡಿ, ಗಂಡಸ್ತನ ಇದ್ದರೆ ಗೆದ್ದು ಬಾ ಎಂದು ನನಗೆ ಪದೇ ಪದೇ ರಮೇಶ ಜಾರಕಿಹೊಳಿ ಸವಾಲು ಹಾಕುತ್ತಿದ್ದಾರೆ. ಇದರಲ್ಲಿ ಗಂಡಸ್ತನವೇನು ಬರುತ್ತದೆ. ಗಂಡಸ್ತನ ತೋರಿಸಲು ಹೋಗಿ ಮಂತ್ರಿ ಪದವಿ ಕಳೆದುಕೊಂಡಿದ್ದು, ಜಗಜ್ಜಾಹೀರಾಗಿದೆ. ಅವರು ಜನರ ಮನವೊಲಿಸುವುದನ್ನು ಬಿಟ್ಟು ಉಡಾಫೆ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read