ಹುಲಿ ಉಗುರು ತಪಾಸಣೆ ವೇಳೆ ಹಕ್ಕು ಚ್ಯುತಿ: ಮಾಜಿ ಡಿಸಿಎಂ ಸವದಿ ಆಕ್ರೋಶ

ಬೆಳಗಾವಿ: ಹುಲಿ ಉಗುರು ತಪಾಸಣೆ ವೇಳೆ ನನ್ನ ಹಕ್ಕು ಚ್ಯುತಿಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.

ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಶಾಸಕನ ಮನೆ ತಪಾಸಣೆ ಮಾಡಬೇಕಾದರೆ ಅನುಮತಿ ಪಡೆಯಬೇಕಾಗುತ್ತದೆ. ಶಾಸಕರ ಗಮನಕ್ಕೆ ತಂದು ಪರಿಶೀಲನೆ ನಡೆಸಬೇಕಾಗುತ್ತದೆ. ಆದರೆ, ನಾನು ಊರಲ್ಲಿ ಇಲ್ಲದಿರುವಾಗ ನನ್ನ ಗಮನಕ್ಕೆ ತಾರದೆ ಅರಣ್ಯ ಇಲಾಖೆ ಅಧಿಕಾರಿಗಳು ನನ್ನ ಮನೆಗೆ ಬಂದು ನನ್ನ ಬೆಡ್ರೂಮ್ ವರೆಗೂ ಹೋಗಿ ಪರಿಶೀಲನೆ ನಡೆಸಿದ್ದಾರೆ ಎಂದು ದೂರಿದ್ದಾರೆ.

ನಾನು ಮನಸ್ಸು ಮಾಡಿದರೆ ಅಧಿಕಾರಿಗಳ ವಿರುದ್ಧ ಮಾನ ನಷ್ಟ ಮೊಕದ್ದಮೆ ದಾಖಲಿಸಬಹುದು ಎಂದು ಹೇಳಿದ ಅವರು, ಶಾಸಕರ ಮನೆ ತಪಾಸಣೆಗೆ ಸರ್ಚ್ ವಾರೆಂಟ್ ಇಲ್ಲದೆ ಬರಬಾರದು. ಇಲ್ಲವೇ ಶಾಸಕರ ಗಮನಕ್ಕೆ ತರಬೇಕಿತ್ತು. ಅಧಿಕಾರಿಗಳು ಲೋಪ ಎಸಗಿದ್ದಾರೆ. ಕಾನೂನು ಪ್ರಕಾರ ನನಗೆ ನೋಟಿಸ್ ನೀಡಬೇಕಿತ್ತು, ಆದರೆ, ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ ನನ್ನ ಹಕ್ಕು ಚ್ಯುತಿಯಾಗಿದೆ. ಈ ಕುರಿತಾಗೆ ಸ್ಪೀಕರ್ ಗೆ ದೂರು ನೀಡಬಹುದು. ಆದರೆ ದೊಡ್ಡ ವಿಷಯವಲ್ಲ ಎಂದು ಸುಮ್ಮನಾಗಿದ್ದೇನೆ. ನನ್ನ ಮಗನ ಕೊರಳಲ್ಲಿ ಇರುವುದು ಹುಲಿ ಉಗುರು ಪೆಂಡೆಂಟ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read