ಬೆಳಗಾವಿ: ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಬೆಜೆಪಿಯ ರೆಬಲ್ ನಾಯಕರ ಟೀಂ ಎಂಎಲ್ ಸಿ ಲಖನ್ ಜಾರಕಿಹೊಳಿಯನ್ನು ಭೇಟಿಯಾಗಿ, ಮಹತ್ವದ ಚರ್ಚೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿರುವ ಎಂಎಲ್ ಸಿ ಲಖನ್ ಜಾರಕಿ ಹೊಳಿ ನಿವಾಸಕ್ಕೆ ತೆರಳಿರುವ ಬಿಜೆಪಿ ರೆಬಲ್ ನಾಯಕರು, ಲಖನ್ ಜಾರಕಿಹೊಳಿ ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.
ಶಾಸಕ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ್ ಲಿಂಬಾವಳಿ, ಬಿ.ಪಿ.ಹರೀಶ್ ಸೇರಿದಂತೆ ಹಲವರು ಲಖನ್ ಜಾರಕಿಹೊಳಿ ಭೇಟಿಯಾಗಿ ಪ್ರತ್ಯೇಕ ಸಭೆ ನಡೆಸಿದ್ದಾರೆ. ಈ ವೇಳೆ ಅರವಿಂದ್ ಲಿಂಬಾವಳಿ, ನೀವು ನಮ್ಮ ಟೀಂ ಗೆ ಬರ್ತೀರಿ ಎಂದು ರಮೇಶ್ ಜಾರಕಿಹೊಳಿ ನಮ್ಮನ್ನು ಇಲ್ಲಿಗೆ ಕರೆತಂದಿದ್ದಾರೆ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ನಾವು ನಿಮ್ಮ ಟಿಮ್ನಲ್ಲಿ ಇದ್ದಂಗೆ ಎಂದು ಹೇಳಿದ್ದಾರೆ. ಈ ಮೂಲಕ ಬಿಜೆಪಿ ರೆಬಲ್ ನಾಯಕರ ಸಭೆ ತೀವ್ರ ಕುತೂಹಲ ಕೆರಳಿಸಿದೆ.