ALERT : ರಾಜ್ಯದಲ್ಲಿ ‘ನಗ್ನ ವಿಡಿಯೋ ದಂಧೆ’ ಬಯಲಿಗೆ : ಮಹಿಳೆಯರನ್ನು ಈ ರೀತಿ ವಂಚಿಸಿ ‘ಬ್ಲ್ಯಾಕ್ ಮೇಲ್’ ಮಾಡ್ತಾರೆ ಹುಷಾರ್.!

ಬೆಳಗಾವಿ : ರಾಜ್ಯದಲ್ಲಿ ನಗ್ನ ವಿಡಿಯೋ ಮಾಡಿ ಹಣಕ್ಕಾಗಿ ಆಮಿಷವೊಡ್ಡುವ ದಂಧೆಯೊಂದು ಬೆಳಕಿಗೆ ಬಂದಿದ್ದು, ಪೊಲೀಸರು ಎಚ್ಚರದಿಂದಿರುವಂತೆ ಸೂಚನೆ ನೀಡಿದ್ದಾರೆ.ಈ ಸಂಬಂಧ ಬೆಳಗಾವಿ ಸೈಬರ್ ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಂಚನೆ ಹೇಗೆ ನಡೆಯುತ್ತದೆ..?

ಮೊದಲು ಮಹಿಳೆಯರಿಗೆ ಮೇಲ್, ಮೆಸೇಜ್, ಕರೆ ಅಥವಾ ವಾಟ್ಸಪ್ ಮೂಲಕ ಒಂದು ಸಂದೇಶ ಬರುತ್ತದೆ. ನಾವು ಕ್ರೈಮ್ ಬ್ರ್ಯಾಂಚ್ ನಿಂದ ಕರೆ ಮಾಡುತ್ತಿದ್ದೇವೆ, . ಒಂದು ಅಪರಾಧ ಪ್ರಕರಣದಲ್ಲಿ ನಿಮ್ಮ ಹೆಸರು ಬಂದಿದೆ. ನೀವು ನಮ್ಮ ಹತ್ತಿರ ಬಂದು, ಯಾಕೆ ಈ ರೀತಿ ಮಾಡಿದೀರಿ ಎಂದು ಪೂರ್ಣ ಮಾಹಿತಿ ನೀಡಬೇಕೆಂದು ಹೇಳುತ್ತಾರೆ.
ನಂತರ ನಾವು ನಿಮ್ಮನ್ನು ಸಂಪೂರ್ಣ ಚೆಕ್ ಮಾಡಬೇಕು, ಕ್ಯಾಮೆರಾ ಮುಂದೆ ಬನ್ನಿ ಎಂದು ಹೇಳುತ್ತಾರೆ, ಬಳಿಕ ನಿಮ್ಮ ದೇಹವನ್ನು ಪರಿಶೀಲಿಸಬೇಕು ಎಂದು ಮಹಿಳೆಯರ ಬಟ್ಟೆ ಬಿಚ್ಚಿಸುತ್ತಾರೆ. ನಂತರ ಈ ವಿಡಿಯೋವನ್ನು ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಾರೆ.ಈ ಸಂಬಂಧ ಬೆಳಗಾವಿ ಸೈಬರ್ ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read