ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಶಾಕ್: ಹಿರಿಯ ಸಿನಿಮಾ ವಿತರಕ ಕುಮಾರಸ್ವಾಮಿ ವಿಧಿವಶ

ಹುಬ್ಬಳ್ಳಿ: ನಾಲ್ಕು ದಶಕಗಳಿಂದ ಸಿನಿಮಾ ವಿತರಕರಾಗಿದ್ದ ಕುಮಾರಸ್ವಾಮಿ ಶಿವಲಿಂಗಪ್ಪ ಶೆಟ್ಟರ್(80) ಭಾನುವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಉತ್ತರ ಕರ್ನಾಟಕದ ಕಲಾರಸಿಕರಿಗೆ ಅತ್ಯುತ್ತಮ ಸಿನಿಮಾ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದ ಕುಮಾರಸ್ವಾಮಿ ಅವರು ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಹುಬ್ಬಳ್ಳಿಯ ಆನಂದನಗರದ ರುದ್ರಭೂಮಿಯಲ್ಲಿ ಸೋಮವಾರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೂಲತಃ ಹಾವೇರಿ ಜಿಲ್ಲೆ ಹಿರೇಕೆರೂರಿನವರಾಗಿದ್ದ ಕುಮಾರಸ್ವಾಮಿ ಶಿವಲಿಂಗಪ್ಪ ಶೆಟ್ಟರ್ ಅವರು ಕುಮಾರೇಶ್ವರ ಚಿತ್ರಮಂದಿರ ನಡೆಸುತ್ತಿದ್ದರು. ನಂತರ ಹುಬ್ಬಳ್ಳಿಗೆ ಬಂದ ಅವರು ಸಿದ್ದಲಿಂಗೇಶ್ವರ ಎಂಟರ್ ಪ್ರೈಸಸ್ ವಿತರಕ ಸಂಸ್ಥೆ ಆರಂಭಿಸಿದ್ದರು.

ಕನ್ನಡದ ಮೇರು ನಟರಾದ ಡಾ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್ ಸೇರಿದಂತೆ ಅನೇಕ ನಟರ ಸುಮಾರು 150ಕ್ಕೂ ಅಧಿಕ ಸಿನಿಮಾಗಳ ವಿತರಣೆ ಮಾಡಿದ್ದಾರೆ. ಅವರ ವಿತರಿಸಿದ ಅನೇಕ ಸಿನಿಮಾಗಳು ಶತದಿನೋತ್ಸವ ಕಂಡಿವೆ. ಉತ್ತರ ಕರ್ನಾಟಕದ ಜನತೆಗೆ ಸಿನಿಮಾ ವೀಕ್ಷಣೆಗೆ ಅನುಕೂಲ ಮಾಡಿಕೊಟ್ಟಿದ್ದ ಕುಮಾರಸ್ವಾಮಿ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read