ಕೆಟಿಎಂ 125 ಡ್ಯೂಕ್ ಮತ್ತು ಆರ್‌ಸಿ 125 ಇನ್ನು ನೆನಪು ಮಾತ್ರ !

ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ ಸಂಸ್ಥೆಯು 125 ಸಿಸಿ ಬೈಕುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದೆ. ಕೆಟಿಎಂ 125 ಡ್ಯೂಕ್ ಮತ್ತು ಆರ್‌ಸಿ 125 ಬೈಕುಗಳು ಏಪ್ರಿಲ್ 1, 2025 ರಿಂದ ಮಾರಾಟಕ್ಕೆ ಲಭ್ಯವಿರುವುದಿಲ್ಲ.

ಹೊಸ ಒಬಿಡಿ2ಬಿ ನಿಯಮಗಳ ಅನುಸಾರವಾಗಿ ಈ ಬೈಕುಗಳನ್ನು ನವೀಕರಿಸುವುದು ಆರ್ಥಿಕವಾಗಿ ಲಾಭದಾಯಕವಲ್ಲದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪನಿ ತಿಳಿಸಿದೆ.

ಕೆಟಿಎಂ 125 ಡ್ಯೂಕ್ 2021ರಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಾಯಿತು. ಈ ಎರಡೂ ಬೈಕುಗಳು 124.7 ಸಿಸಿ ಲಿಕ್ವಿಡ್ ಕೂಲ್ಡ್, ಡಿಒಹೆಚ್‌ಸಿ ಎಂಜಿನ್ ಮತ್ತು 6 ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತವೆ. 125 ಡ್ಯೂಕ್ 14.5 ಬಿಎಚ್‌ಪಿ ಪವರ್ ಮತ್ತು 12 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತೀಯ ಗ್ರಾಹಕರು ಈಗ ದೊಡ್ಡ ಎಂಜಿನ್ ಬೈಕುಗಳತ್ತ ಗಮನ ಹರಿಸುತ್ತಿದ್ದಾರೆ. 350 ಸಿಸಿ, 390 ಸಿಸಿ, 450 ಸಿಸಿ ಬೈಕುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹಾಗಾಗಿ ಕೆಟಿಎಂ ಸಂಸ್ಥೆಯು ತನ್ನ ಗಮನವನ್ನು ದೊಡ್ಡ ಎಂಜಿನ್ ಬೈಕುಗಳ ಉತ್ಪಾದನೆಯತ್ತ ಕೇಂದ್ರೀಕರಿಸಲು ನಿರ್ಧರಿಸಿದೆ. ಇತ್ತೀಚೆಗೆ 390 ಎಂಡ್ಯೂರೋ ಮತ್ತು ಇತರ ದೊಡ್ಡ ಬೈಕುಗಳನ್ನು ಕೆಟಿಎಂ ಪರಿಚಯಿಸಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read