ಮಹಿಳಾ ಕಂಡಕ್ಟರ್ ಗಳಿಗೆ KSRTC ಅಧಿಕಾರಿಗಳಿಂದ ಕಿರುಕುಳ; ಸಿಎಂ ಹಾಗೂ ಸಾರಿಗೆ ಸಚಿವರಿಗೆ ಪತ್ರ ಬರೆದು ದೂರು

ಬೆಂಗಳೂರು: ರಾಜ್ಯ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಜಾರಿಗೆ ತಂದಿದೆ. ಆದರೆ ಕೆ ಎಸ್ ಆರ‍್ ಟಿಸಿ ಅಧಿಕಾರಿಗಳು ಮಹಿಳಾ ಕಂಡಕ್ಟರ್ ಗಳಿಗೆ ಹಗಲು ರಾತ್ರಿ ಶ್ರಮಿಸುವಂತೆ ಟಾರ್ಚರ್ ನೀಡಿತ್ತಿದ್ದಾರೆ. ಈ ಬಗ್ಗೆ ಮಹಿಳಾ ಕಂಡಕ್ಟರ್ ಗಳು ಸಾರಿಗೆ ಸಚಿವರಿಗೆ ಪತ್ರ ಬರೆದು ದೂರು ನೀಡಿದ್ದಾರೆ.

ಬೆಂಗಳೂರಿನ ದೀಪಾಂಜಲಿ ನಗರದ ಕೆ ಎಸ್ ಆರ‍್ ಟಿ ಸಿ ಡಿಪೋ 5ರ ಕಂಡಕ್ಟರ್ ನಂಜಮ್ಮ ಅಧಿಕಾರಿಗಳ ಕಿರುಕುಳದ ಬಗ್ಗೆ ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾರೆ. ಋತುಚಕ್ರದ ಸಮಸ್ಯೆ ಇದ್ದರೂ ಡ್ಯೂಟಿ ಮಾಡಿ ಎಂದು ಟಾರ್ಚರ್ ಕೊಡುತ್ತಿದ್ದಾರೆ. ಅಧಿಕಾರಿಗಳ ಕಿರುಕುಳದ ಬಗ್ಗೆ ಸಿಟಿಎಂ ಅಂತೋಣಿ ಜಾರ್ಜ್ ಗಮನಕ್ಕೆ ತಂದರೆ ದರ್ಪದ ಮಾತುಗಳನ್ನು ಆಡಿ ಅವಾಚ್ಯವಾಗಿ ನಿಂದಿಸುತ್ತಿದ್ದಾರೆ. ಈ ಹಿಂದೆಯೂ ಅಧಿಕಾರಿಗಳ ಕಿರುಕುಳದ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಪತ್ರದ ಮೂಲಕ ದೂರು ನೀಡಿದ್ದಾಗಿ ತಿಳಿಸಿದ್ದಾರೆ.

ಡಿಪೋ ಮ್ಯಾನೇಜರ್ ಅನಗತ್ಯವಾಗಿ ತಡವಾಗಿ ಡ್ಯೂಟಿ ಹಾಕುತ್ತಾರೆ. ಬೇಗ ಬಂದರೂ ಡ್ಯೂಟಿ ಹಾಕದೇ ಸುಮ್ಮನೇ ಕೂರಿಸಿರುತ್ತಾರೆ. ಬಳಿಕ ತಡವಾಗಿ ಡ್ಯೂಇ ಹಾಕಿ ಎಷ್ಟು ತಡವಾದರೂ ಡ್ಯೀಟಿ ಮುಗಿಸಿ ಮನೆಗೆ ಹೋಗಬೇಕು ಎಂದು ಹೇಳುತ್ತಾರೆ. ಇದರಿಂದ ಮಹಿಳಾ ಕಂಡಕ್ಟರ್ ಬೇಸತ್ತು ಹೋಗಿದ್ದು, 44 ಸಿಬ್ಬಂದಿಗಳು ಸಹಿ ಸಂಗ್ರಹಿಸಿ ಅಧಿಕಾರಿಗಳ ವಿರುದ್ಧ ಸಿಎಂ ಹಾಗೂ ಸಾರಿಗೆ ಸಚಿವರಿಗೆ ಪತ್ರದ ಮೂಲಕ ದೂರು ನೀಡಿದ್ದಾಗಿ ಮಂಜಮ್ಮ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read