ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಿಂದ ತೆರಳುತ್ತಿದ್ದ ಕೆ.ಎಸ್.ಆರ್.ಟಿ,ಸಿ ಬಸ್ ಬ್ರೇಕ್ ಫೇಲ್ ಆಗಿದ್ದು, ತಕ್ಷಣ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಪ್ರಯಾಣಿಕರು ಬಚಾವ್ ಆಗಿರುವ ಘಟನೆ ನಡೆದಿದೆ.
ಮೈಸೂರು ಡಿಪೋಗೆ ಸೇರಿದ ಬಸ್ ಮಹದೇಶ್ವರ ಬೆಟ್ತದಿಂದ ಕೊಳ್ಳೆಗಾಲಕ್ಕೆ ತೆರಳುತ್ತಿತ್ತು. ತಾಳಬೆಟ್ಟ ತಿರುವಿನಲ್ಲಿ ಬಸ್ ಏಕಾಏಕಿ ಬ್ರೇಕ್ ಫೇಲ್ ಆಗಿದೆ. ಚಾಲಕ ಕೂಡಲೇ ಬಸ್ ನ್ನು ಡಿವೈಡರ್ ಮೇಲೆ ಹತ್ತಿಸಿದ್ದಾರೆ. ಒಂದುವೇಳೆ ಡಿವೈಡರ್ ಮೇಲೆ ಹತ್ತಿಸದಿದ್ದರೆ ಬಸ್ ಕಂದಕಕ್ಕೆ ಬೀಳುತ್ತಿತ್ತು.
ಬಸ್ ಚಾಲಕನ ಸಮಯಪ್ರಜ್ಞೆಯಿಂದಾಗಿ 60 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಚಾಲಕನಿಗೆ ಸ್ಧನ್ಯವಾದ ತಿಳಿಸಿದ್ದಾರೆ. ಪ್ರಯಾಣಿಕರಿಗೆ ಬೇರೆ ಬಸ್ ವ್ಯವಸ್ಥೆ ಮಾಡಿ ನಿರ್ವಾಹಕ ಪ್ರಯಾಣಿಕರನ್ನು ಇನ್ನೊಂದು ಬಸ್ ನಲ್ಲಿ ಕಳುಹಿಸಿದ್ದಾರೆ.