BIG NEWS: ಕೆ.ಎಸ್.ಆರ್.ಪಿ ಪೊಲೀಸ್ ನಿಂದ ಯುವತಿ ಮೇಲೆ ಅತ್ಯಾಚಾರ: ದೂರು ದಾಖಲು

ಕಲಬುರಗಿ: ಇನ್ ಸ್ಟಾಗ್ರಾಂ ನಲ್ಲಿ ಪರಿಚಯನಾದ ಕೆಎಸ್ಆರ್ ಪಿ ಪೊಲೀಸ್ ಯುವತಿಯೊಂದಿಗೆ ಪ್ರೀತಿ-ಪ್ರೇಮದ ನಾಟಕವಾಡಿ, ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ಕೈಕೊಟ್ಟ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕೆಎಸ್ಆರ್ ಪಿ ಪೊಲೀಸ್ ಯಲ್ಲಾಲಿಂಗ ಮೇತ್ರಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ ಸ್ಟಾಗ್ರಾಂ ಮೂಲಕ ಯುವತಿಗೆ ಪರಿಚಯವಾದ ಯಲ್ಲಾಲಿಂಗ, ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದಾನೆ. ಆಗಸ್ಟ್ 8ರಂದು ಕಲಬುರಗಿಗೆ ಬರುವಂತೆ ಯುವತಿಯನ್ನು ಕರೆಸಿಕೊಂಡ ಆರೋಪಿ, ಅಂದು ರಾತ್ರಿ ಕಲಬುರಗಿ ಬಸ್ ನಿಲ್ದಾಣದ ಎದುರಿನ ಖಾಸಗಿ ಲಾಡ್ಜ್ ಗೆ ಕರೆದೊಯ್ದಿದ್ದಾನೆ. ರೂಂ ನಲ್ಲಿ ಯಲ್ಲಾಲಿಂಗ ಯುವತಿಯನ್ನು ಸರಸಕ್ಕೆ ಕರೆದಿದ್ದಾನೆ. ಇದಕ್ಕೆ ನಿರಾಕರಿಸಿದ್ದಕ್ಕೆ ಆಕೆ ಮೇಲೆ ಬಲವಂತದಿಂದ ಅತ್ಯಾಚಾರವೆಸಗಿದ್ದಾನೆ. ಬಳಿಕ ನಾಳೆ ನಿನ್ನ ಮದುವೆಯಾಗುವುದಾಗಿ ಹೇಳಿದ್ದಾನೆ. ಬೆಳಿಗ್ಗೆ ಯುವತಿ ಮದುವೆಯಾಗು ಎಂದಿದ್ದಕ್ಕೆ ಇಂದು ನನಗೆ ಡ್ಯೂಟಿ ಮೇಲೆ ಹುಮನಾಬಾದ್ ಗೆ ಕೆಲಸ ಹಾಕಿದ್ದಾರೆ. ಅಲ್ಲಿಗೆ ಹೋಗಬೇಕು. ನಾಳೆ ಮದುವೆಯಾಗೋಣ ಎಂದು ಹೇಳಿ ಲಾಡ್ಜ್ ನಲ್ಲಿಯೇ ಯುವತಿಯನ್ನು ಬಿಟ್ಟು ತೆರಳಿದ್ದಾನೆ.

ಹೀಗೆ ಲಾಡ್ಜ್ ನಿಂದ ಎಸ್ಕೇಪ್ ಆದ ಯಲ್ಲಾಲಿಂಗ ವಾಪಾಸ್ ಬಂದಿಲ್ಲ. ಸಂತ್ರಸ್ತೆ ಕರೆ ಮಾಡಿದರೂ ಫೋನ್ ಸ್ವೀಕರಿಸಿಲ್ಲ. ಸಂತ್ರಸ್ತೆ ಹೋಗೋ ಕಷ್ಟಪಟ್ಟು ಮತ್ತೆ ಆತನನ್ನು ಸಂಪರ್ಕಿಸಿದಾಗ ನಿನ್ನ ಮದುವೆಯಾಗಲು ನಮ್ಮ ಮನೆಯಲ್ಲಿ ಒಪ್ಪುತ್ತಿಲ್ಲ ಎಂದು ಹೇಳಿದ್ದಾನೆ. ವರದಕ್ಷಿಣೆ ಹೆಚ್ಚು ಕೊಟ್ಟರೆ ಮದುವೆ ಮಾಡಿಕೊಳ್ಳುತ್ತೇನೆ ಎಂದಿದ್ದಾನೆ. ಇದರಿಂದ ನೊಂದ ಯುವತಿ, ಕಲಬುರಗಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಆರೋಪಿ ಯಲ್ಲಾಲಿಂಗ ವಿರುದ್ಧ ಬಿಎನ್ ಎಸ್ ಕಾಯ್ದೆ 64, 318(B), 351, 352 ಅಡಿಯಲ್ಲಿ ಕೇಸ್ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read